Sunday 16 February 2020

ಗೆಲುವು ಸೋಲಾಗಬಾರದು.

"ಗೆಲುವೇ ಸೋಲಾಗಬಾರದು; ಮಕ್ಕಳು ಸೋಲಲಿ ಬಿಡಿ"

ತಂದೆ ತಾಯಂದಿರ ಯೋಚನಾ ಕ್ರಮವೇ ಮಕ್ಕಳ ಅಭಿರುಚಿ, ಆಸಕ್ತಿಯನ್ನು ರೂಪಿಸುತ್ತದೆ. ಮುಂದೆ ಅವರ ಭವಿಷ್ಯವನ್ನು ಕೂಡ. ಮಕ್ಕಳನ್ನು ಹೇಗೆ ಮತ್ತು ಯಾವುದಕ್ಕಾಗಿ ಬೆಳೆಸಬೇಕು ಎನ್ನುವ ಸ್ಪಷ್ಟತೆ ತಂದೆ ತಾಯಂದಿರಿಗಿರಬೇಕು. ಬದುಕೆಂದರೆ ದೊಡ್ಡ ಮನೆ, ದೊಡ್ಡ ಕಾರು, ಸಂಪತ್ತು ಎನ್ನುವ ಕಲ್ಪನೆಯಿಂದ ಹೊರಬರಬೇಕಿದೆ.

ಸ್ವಾಮಿ ವಿವೇಕಾನಂದರ ಮಾತುಗಳನ್ನು ನೆನಪಿಸುವುದಾದರೆ ಪ್ರಪಂಚದಲ್ಲಿ ಶ್ರೀಮಂತಿಕೆಗಿಂತ ಬಡತನವೇ ಹೆಚ್ಚು ಪಾಠ ಕಲಿಸುತ್ತದೆ. ಸಂತೋಷದ ಸಂದರ್ಭಗಳಿಗಿಂತ ಕಷ್ಟದ ಸಂದರ್ಭಗಳು ಮನುಷ್ಯನ ವಿವೇಕವನ್ನು ಬೆಳಗಿಸುತ್ತವೆ. ಸಮ್ಮಾನಕ್ಕಿಂತ ಅವಮಾನ ವ್ಯಕ್ತಿಯಲ್ಲೊಂದು ಬೆಂಕಿಯನ್ನೆ ಬ್ಬಿಸುತ್ತದೆ. ನಾವೆಲ್ಲಾ ಸೋಲನ್ನು ದ್ವೇಷಿಸುತ್ತೇವೆ. ನಮ್ಮ ಮಕ್ಕಳು ಯಾವುದೇ ಸೋಲಿಗೆ ಒಳಗಾಗಬಾರದೆಂದು ಎಚ್ಚರ ವಹಿಸುತ್ತೇವೆ. ವಿಪರ್ಯಾಸವೆಂದರೆ ಜೀವನದಲ್ಲಿ ಹೆಚ್ಚಿನವರು ಸೋತು ಸುಣ್ಣವಾಗಿ ಯಶಸ್ಸಿನ ಶಿಖರವೇರಿದವರೇ. KG ಕ್ಲಾಸಿನಿಂದಲೇ A+ಪಡೆಯುತ್ತಿದ್ದ ಮಗು ಯಾವುದೇ ಕ್ಲಾಸಿನಲ್ಲಿ ಯಾವುದೇ ವಿಷಯದಲ್ಲಿ B ಗ್ರೇಡ್‌ ಸಿಕ್ಕಿದರೆ ಗೊಂದಲಕ್ಕೊಳಗಾಗುತ್ತದೆ (ಹೆತ್ತವರಂತೂ ತಮ್ಮ ಮಕ್ಕಳಿಗಿಂತ ಗ್ರೇಡ್‌ಗಳನ್ನು ಹೆಚ್ಚು ಪ್ರೀತಿಸುತ್ತಾರೆ). ಮಗು ದೊಡ್ಡವನಾಗಿ ಯಾವುದೇ ವಿಷಯದಲ್ಲಿ ಫೇಲಾದರೆ ಮುಗಿಯಿತು. ಇನ್ನು ಬದುಕೇ ಇಲ್ಲದಂತೆ ಕೆಲವರಂತೂ ತುಂಬಾ ವಿಪರೀತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಶಾಲೆ ಕಾಲೇಜುಗಳಲ್ಲಿ ಮಕ್ಕಳನ್ನು ಯಶಸ್ಸಿಗಾಗಿ ಮಾತ್ರ ತಯಾರು ಮಾಡುತ್ತೇವೆ. ಕೆಲವು ತಂದೆ ತಾಯಂದಿರು KG ಕ್ಲಾಸಿನಿಂದಲೇ IIT foundation courseಗೆ ಮಕ್ಕಳನ್ನು ಸೇರಿಸಿ ಬಿಟ್ಟಿರುತ್ತಾರೆ. ತಪ್ಪಲ್ಲ, ಐಐಟಿ ಸೇರಿದರೆ ಮಾತ್ರ ಯಶಸ್ಸು ಎಂಬ ಮಿತಿಯನ್ನು ಮಗುವಿನ ತಲೆಯಲ್ಲಿ ತುಂಬಿದರೆ ಅದು ಅಪರಾಧ.

ಅನೇಕ ಸಂದರ್ಭಗಳಲ್ಲಿ ನಮ್ಮ ಜೀವನದ ಅಭದ್ರತೆಯ ಭಾವನೆಯನ್ನು ನಮ್ಮ ಮಕ್ಕಳಿಗೆ ಹೇರಿ ಬಿಡುತ್ತೇವೆ. ಜೀವನದಲ್ಲಿ ಸೋಲೇ ಬರಬಾರದು ಎನ್ನುವ ಮನಃಸ್ಥಿತಿ ತುಂಬಾ ಅಪಾಯಕಾರಿ. ನಡೆಯುವಾಗ ಬೀಳಲೇಬಾರದು ಎಂದು ನಿರ್ಧರಿಸಿದರೆ ನಡೆಯಲು ಪ್ರಯತ್ನಿಸುವುದಾದರೂ ಹೇಗೆ?. ನಡೆಯುವಾಗ ಬೀಳುವುದು ಸಹಜ. ಬಿದ್ದಾಗ ಪೆಟ್ಟಾಗದಂತೆ ನೋಡಿಕೊಳ್ಳುವ, ಬಿದ್ದರೂ ಎದ್ದು ನಡೆಯುವ ಆತ್ಮವಿಶ್ವಾಸವನ್ನು ಮಕ್ಕಳಿಗೆ ತುಂಬಬೇಕಿದೆ. ನಾವು ಮಕ್ಕಳನ್ನು ಯಾವ ರೀತಿ ಯಶಸ್ಸಿಗಾಗಿ ತಯಾರು ಮಾಡುತ್ತೇವೆಯೋ ಅದೇ ರೀತಿ ಜೀವನದಲ್ಲಿ ಬರುವ ಸೋಲಿಗೂ ತಯಾರು ಮಾಡುವ ಮನಃಸ್ಥಿತಿ ಹೆತ್ತವರದಾಗಬೇಕು. ಹಲವಾರು ಸಂದರ್ಭಗಳಲ್ಲಿ ತಥಾಕಥಿತ ಸೋಲೇ ಮುಂದೆ ತನ್ನ ಅತ್ಯುತ್ತಮ ಸಾಧನೆಗೆ ದಾರಿಯಾಗುತ್ತಯೆಂಬ ಬಲವಾದ ನಂಬಿಕೆಯಿರಬೇಕು. ಒಬ್ಬ ಸಾಮಾನ್ಯ, ಸಂಕೋಚದ ಹುಡುಗ ಮೋಹನದಾಸ, ದಕ್ಷಿಣ ಆಫ್ರಿಕಾದಲ್ಲಿ ರೈಲಿನಿಂದ ತನ್ನನ್ನು ಹೊರದಬ್ಬಿದ ಅವಮಾನದ ಕಾವಿನಲ್ಲೆ ಮಹಾತ್ಮನಾಗಿ ರೂಪುಗೊಳ್ಳುವುದಕ್ಕೆ ಸಾಧ್ಯವಾಯ್ತು.

ಹಲವು ಸೋಲುಗಳ ಬಳಿಕ ಥಾಮಸ್‌ ಆಲ್ವ ಎಡಿಸನ್‌ ಬಲ್ಬ್ ಕಂಡು ಹಿಡಿದ. ಅದನ್ನು ಹೋಲ್ಡರ್‌ಗೆ ಜೋಡಿಸುವಾಗಲೂ ತನ್ನ ನೌಕರರಿಗೆ ಬದುಕಿನ ಪಾಠ ಮಾಡಿದ. ಹೊಸದಾಗಿ ತಯಾರಿಸಿದ ಬಲ್ಬನ್ನು ಜೋಡಿಸಲು ಎಡಿಸನ್‌ ಆರಿಸಿದ್ದು ತನ್ನ ಕಂಪೆನಿಯ ಅತ್ಯಂತ ಕಡಿಮೆ ಆತ್ಮವಿಶ್ವಾಸದ ಹುಡುಗನನ್ನು. ಆ ಹುಡುಗ ನಡುಗುವ ಕೈಯಲ್ಲಿ ಬಲ್ಬ್ ಜೋಡಿಸಲು ಮುಂದಾದ. ಬಲ್ಬ್ ಕೈಯಿಂದ ಜಾರಿ ಕೆಳಗೆ ಬಿದ್ದು ಚೂರಾಯಿತು. ಎರಡನೇ ಬಾರಿಯು ಎಡಿಸನ್‌ ಅದೇ ಹುಡುಗನ್ನು ಕರೆದ. ಎರಡನೇ ಬಾರಿಯೂ ಬಲ್ಬ್ ಕೆಳಗೆ ಬಿತ್ತು. ಆದರೂ ಎಡಿಸನ್‌ ಮತ್ತೆ ಮತ್ತೆ ಅದೇ ಹುಡುಗನಿಗೆ ಹೇಳಿದ. ಕಂಪೆನಿ ನೌಕರರು ಎಡಿಸನ್‌ಗೆ ತಲೆ ಕೆಟ್ಟಿರಬೇಕೆಂದು ಆಡಿಕೊಂಡರು. ಮೊದಲ ಬಾರಿಗೆ ಕಂಡು ಹಿಡಿದ ಅತ್ಯಮೂಲ್ಯ ಬಲ್ಬನ್ನು ನಿಷ್ಪ್ರಯೋಜಕನೊಬ್ಬನ ಕೈಯಲ್ಲಿ ಕೊಟ್ಟು ಸಮಯ ಮತ್ತು ಶ್ರಮ ವ್ಯರ್ಥಮಾಡುತ್ತಿದ್ದಾನೆೆಂದುಕೊಂಡರು. ಎಡಿಸನ್‌ ಪಟ್ಟು ಸಡಿಲಿಸಲಿಲ್ಲ. ಈ ಬಾರಿಯೂ ಅವನನ್ನೇ ಕರೆದ. ಎಲ್ಲರೂ ತಮಾಷೆ ನೋಡುತಿದ್ದರು. ಹುಡುಗ ಬಲ್ಬ್ ಹಿಡಿದು ಮೇಲೆತ್ತಿದ. ಕೊನೆಗೂ ಜೋಡಿಸಿಯೇ ಬಿಟ್ಟ. ಬಲ್ಬ್ ಉರಿಯಿತು. ಅದಕ್ಕಿಂತಲೂ ಪ್ರಕಾಶಮಾನವಾಗಿ ಹುಡುಗನ ಮುಖದಲ್ಲಿ ನಗು ಮಿನುಗುತ್ತಿತ್ತು. ಎಡಿಸನ್‌ ಹೇಳಿದ ಬಲ್ಬ್ ಒಡೆದರೆ ಬೇರೆ ತಯಾರಿಸಬಹುದು ಅದರೆ ಮನುಷ್ಯನ ಆತ್ಮವಿಶ್ವಾಸವೇ ಒಡೆದರೆ ಜೋಡಿಸುವುದು ಕಷ್ಟ. ಆತ್ಮವಿಶ್ವಾಸ ಕೊಡುವುದೇ ನಿಜವಾದ ಶಿಕ್ಷಣ.

ಜೀವನವನ್ನು ತುಂಬಾ ಸ್ಟ್ರಕ್ಚರ್ಡ್ ಆಗಿ ರೂಪಿಸಿದಾಗ ಹಣಕಾಸಿನ ಯಶಸ್ಸು ಬಹುತೇಕ ಖಾತರಿ. ಆದರೆ ಜೀವನದ ಯಶಸ್ಸಿನ‌ OUTLINE ಇಲ್ಲದಿದ್ದಾಗ ಜೀವನ ಹೆಚ್ಚು ಚೇತೋಹಾರಿ, ಸೃಜನಾತ್ಮಕ. ಗೆಲುವಿಗಾಗಿ ಒದ್ದಾಟವೇ ಒಂದು ಅನುಭವ. ರೆಡಿಮೇಡ್‌ ಯಶಸ್ಸು ಅಪಾಯಕಾರಿ. ಒಂದೆರಡು ಸೋಲುಗಳ ನಂತರ ಬರುವ ಗೆಲುವು ಪ್ರಬುದ್ಧ.

ಹಲವಾರು ಸಂದರ್ಭಗಳಲ್ಲಿ ತಂದೆ ತಾಯಂದಿರ ಯೋಚನಾ ಕ್ರಮವೇ ಮಕ್ಕಳ ಅಭಿರುಚಿ, ಆಸಕ್ತಿಯನ್ನು ರೂಪಿಸುತ್ತದೆ. ಮುಂದೆ ಅವರ ಭವಿಷ್ಯವನ್ನು ಕೂಡ. ಮಕ್ಕಳನ್ನು ಹೇಗೆ ಮತ್ತು ಯಾವುದಕ್ಕಾಗಿ ಬೆಳೆಸಬೇಕು ಎನ್ನುವ ಸ್ಪಷ್ಟತೆ ತಂದೆ ತಾಯಂದಿರಿಗಿರಬೇಕು. ಬದುಕೆಂದರೆ ದೊಡ್ಡ ಮನೆ, ದೊಡ್ಡ ಕಾರು, ಮುಗಿಯದ ಸಂಪತ್ತು ಎನ್ನುವ ಕಲ್ಪನೆಯಿಂದ ನಾವು ಹೊರಬರಬೇಕಿದೆ. ದೊಡ್ಡ ದೊಡ್ಡ ಗಣಿತದ (ವಿಜ್ಞಾನದ) ಸಮಸ್ಯೆಗಳನ್ನು ಬಿಡಿಸಿ ನೂರಕ್ಕೆ ನೂರು ಮಾರ್ಕ್‌ ತೆಗೆಯುವ, ಭಾಷಣ, ಸಾಮಾನ್ಯ ಜ್ಞಾನಗಳಲ್ಲಿ ಪ್ರಥಮ ಸ್ಥಾನವನ್ನೇ ಪಡೆಯುವ ಮಗು, ಕ್ಲಾಸ್‌ನಲ್ಲಿ ಉನ್ನತ ಗ್ರೇಡ್‌ಗಳನ್ನು ಪಡೆಯುವ ಮಗು, ತನ್ನ ಭಾವನೆಗಳನ್ನು ನಿಭಾಯಿಸಲು, ಆಂತರಿಕ ಗೊಂದಲಗಳನ್ನು ಪರಿಹರಿಸಲು, ಒತ್ತಡಗಳನ್ನು ನಿಭಾಯಿಸಲು ಸೋತರೆ ಉಳಿದವುಗಳೆಲ್ಲ ಗೌಣವಾಗಿ ಬಿಡುತ್ತವೆ. ತಂದೆ ತಾಯಂದಿರು ಮಕ್ಕಳೆದುರು ತಮ್ಮನ್ನು ತಾವು ಸೂಪರ್‌ಮ್ಯಾನ್‌ ಅಥವಾ ಸೂಪರ್‌ವುಮನ್‌ ಆಗಿ ಬಿಂಬಿಸಿಕೊಳ್ಳದೆ ತಾವೂ ಜೀವನದಲ್ಲಿ ಸೋತಿದ್ದೇವೆ, ಎಡವಿದ್ದೇವೆ ಎನ್ನುವುದನ್ನು ತಿಳಿಸಬೇಕು. ಜೀವನದಲ್ಲಿ ಸೋಲುಗಳು ನಮ್ಮನ್ನು ಪರಿಪಕ್ವವಾಗಿಸುತ್ತವೆ ಮತ್ತು ಸೋಲುಗಳು ಜೀವನದಲ್ಲಿ ಅತ್ಯಂತ ಸಹಜ ಎನ್ನುವುದು ಅವರಿಗೆ ಮನವರಿಕೆಯಗಬೇಕು. ಸೋಲಿನ ಭೀತಿಯಿಂದ ಹೊರಬರುವುದೇ ಅತಿ ದೊಡ್ಡ ಶಿಕ್ಷಣ.

ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್‌ರ ಕತೆ ಇನ್ನೂ ರೋಚಕ. ಲಿಂಕನ್‌ ಅಧ್ಯಕ್ಷರಾಗಿ ಸಂಸತ್‌ ಪ್ರವೇಶ ಮಾಡಿದಾಗ ಅಲ್ಲೇ ಇದ್ದ ಶ್ರೀಮಂತನೊಬ್ಬ ಅವರಿಗೆ ಅವಮಾನ ಮಾಡಲು ಬಯಸಿದ. ಲಿಂಕನ್‌ ನೀವೀಗ ಅಧ್ಯಕ್ಷರಾಗಿರಬಹುದು, ಆದರೆ ನೆನಪಿರಲಿ, ನೀವೊಬ್ಬ ಚಮ್ಮಾರನ ಮಗ ಅಂದ. ಲಿಂಕನ್‌ ಶ್ರೀಮಂತನ ಕಡೆಗೆ ತಿರುಗಿ ಮುಗುಳ್ನಗುತ್ತ ಉತ್ತರಿಸಿದರು, ಹೌದು ನನ್ನ ತಂದೆ ಒಬ್ಬ ಚಮ್ಮಾರ, ಅದರ ಬಗ್ಗೆ ನನಗೆ ಹೆಮ್ಮೆ ಇದೆ. ಆತನೊಬ್ಬ ಅದ್ಭುತ ಕಲಾಗಾರ. ಆತ ಪ್ರತಿಯೊಂದು ಶೂವನ್ನು ಅದಮ್ಯ ತಾದಾತ್ಮತೆಯಿಂದ ಮಾಡುತ್ತಿದ್ದ. ಆತನಿಗೆ ಅದೊಂದು ತಪಸ್ಸು. ಹಾಗಾಗಿ ಆತನ ಕೆಲಸವನ್ನು ಯಾರೂ ಬೊಟ್ಟುಮಾಡಿ ತೋರಿಸುವಂತಿರಲಿಲ್ಲ. ನಿಮ್ಮಂತಹ ಎಲ್ಲಾ ಶ್ರೀಮಂತರ ಶೂಗಳನ್ನು ಅವನೇ ಮಾಡಿದ್ದಾನೆ. ನನಗೂ ಸ್ವಲ್ಪ ಶೂ ಮಾಡೋದ್‌ ಗೊತ್ತಿದೆ. ನಿಮ್ಮ ಶೂನಲ್ಲೇದರೂ ಸಮಸ್ಯೆಯಿದ್ದರೆ ತಿಳಿಸಿ, ನಾನೇ ನಿಮಗೊಂದು ಜೊತೆ ಹೊಸ ಶೂ ಮಾಡಿಕೊಡುತ್ತೇನೆ’. ಇಡೀ ಸಂಸತ್‌ನಲ್ಲಿ ನೀರವ ಮೌನ. ಕಿತ್ತು ತಿನ್ನುವ ಬಡತನ, ಸಾಮಾಜಿಕ ನಿಂದನೆ, ಸರಣಿ ರಾಜಕೀಯ ಸೋಲುಗಳಲ್ಲಿ ಬೆಂದು ಅಪ್ಪಟ ಚಿನ್ನವಾದವರು ಲಿಂಕನ್‌. ಸೋಲಿನಿಂದ ಪರಿಪಕ್ವನಾದವನನ್ನು ಸೋಲಿಸುವುದಾಗಲಿ, ಆವಮಾನಿಸುವುದಾಗಲಿ ಅಸಾಧ್ಯ.

ಮಗುವಿನಲ್ಲಿ ತನ್ನ ಪರಂಪರೆ, ಸಂಸ್ಕೃತಿ, ಕಸುಬು, ದೇಶ, ಭಾಷೆ, ಅಪ್ಪ ಅಮ್ಮನ ಬಗ್ಗೆ ಅತೀವ ಗೌರವ ಮತ್ತು ಹೆಮ್ಮೆಯನ್ನು ಬೆಳೆಸುವುದು ಶಿಕ್ಷಣದ ಮುಖ್ಯ ಭಾಗವಾಗಬೇಕು. ಶಿಕ್ಷಣ ನಮ್ಮ ಪದವಿ, ಕೆಲಸ, ಹುದ್ದೆ, ಶ್ರೀಮಂತಿಕೆ, ಕೀರ್ತಿಗಳ ಕಡೆಗಿನ ಓಟದ ಮಧ್ಯದಲ್ಲಿ ಬದುಕಿಗೆ ಮಹತ್ವ ಕೊಡಬೇಕಿದೆ. ಸೋಲು ಬೀಳಿನ ಜೊತೆಗೆ ನಗುನಗುತಾ ಸುಂದರ ಜೀವನ ಕಟ್ಟಿಕೊಳ್ಳುವುದನ್ನು ಕಲಿಸಬೇಕಿದೆ. ಅದಕ್ಕಾಗಿಯೇ ಮಕ್ಕಳನ್ನು ಸೋಲುವುದಕ್ಕೆ ಬಿಡಿ. ಬದುಕಲ್ಲಿ ಸೋಲೇ ಗೆಲುವು. ಗೆಲುವು ಸೋಲಾಗಬಾರದು.

Courtesy...
Whatsapp msg
R D D

Wednesday 8 January 2020

Let we all be Carpathians!

There were 3 ships which were nearby when the Titanic sunk.
 Published as received:

Sampson. It was 7 miles away from the Titanic, but because the crew had been hunting seals illegally & didn't want to be caught, they turned away from the Titanic.

# This ship represents those of us who are so busy in our own sin &lives that we can't recognize when someone else is in need.

Californian. This ship was only 14 miles away from the Titanic, but because the conditions weren't favorable & it was dark,  the crew convinced themselves that nothing was happening.

#  This ship represents those of us who say I can't do anything now and we wait until conditions are perfect.

 Carpathia. This ship was actually headed in a southern direction 58 miles away from the Titanic when they heard the distress cries over the radio. The captain of this ship prayed to God for direction, turned the ship around & went full steam ahead through the ice fields. This was the ship that saved the 705 survivors of the Titanic.

Obstacles and reasons to avoid responsibility shall always be there, but those who accept it always find a place in the hearts to be remembered for the world of good they do.

I really wish, let we all be Carpathians in life and make the world  a more beautiful place to live in!

Courtesy MTC Global

ಒಲಿದಂತೆ ಬದುಕುವಾ

*ಒಲಿದಂತೆ ಬದುಕುವಾ...*

ಅಳುವ ಕಡಲೊಳೂ ತೇಲಿ ಬರುತಲಿದೆ /

ನಗೆಯ ಹಾಯಿ ದೋಣಿ; ಬಾಳ ಗಂಗೆಯ ಮಹಾಪೂರದೊಳೂ/

ಸಾವಿನೊಂದು ವೇಣಿ  (ಎಂ ಗೋಪಾಲಕೃಷ್ಣ ಅಡಿಗ)

ಅರ್ಜುನನ ಮೊಮ್ಮಗ, ಅಭಿಮನ್ಯು-ಉತ್ತರೆಯರ ಮಗ ಪರೀಕ್ಷಿತ ಮಹಾರಾಜ ಒಮ್ಮೆ ಬೇಟೆಯಾಡಲು ಅಡವಿಗೆ ತೆರಳಿದ್ದ. ಅನೇಕ ಮೃಗಪಕ್ಷಿಗಳನ್ನು ಬೇಟೆಯಾಡಿ ದರೂ ರಾಜನಿಗೆ ಸಮಾಧಾನವಿಲ್ಲ. ಕಾರಣ ಒಂದು ಜಿಂಕೆ ರಾಜನ ಬಾಣದ ಗುರಿಗೆ ಸಿಲುಕದೆ ಸತಾಯಿಸುತ್ತಿತ್ತು. ಜಿಂಕೆಯನ್ನೇ ಬೆನ್ನಟ್ಟುತ್ತ ರಾಜ ತನ್ನ ಗುಂಪನ್ನು ಬಿಟ್ಟು ದೂರದೂರ ಸಾಗಿದ. ಅಸಹನೆ ಕಾಡಿತು, ಶಬ್ಧವೇದಿ ವಿದ್ಯೆ ಬಲ್ಲ ಅರ್ಜುನನ ಮೊಮ್ಮಗನಾದ ನನಗೆ ಒಂದು ಜಿಂಕೆಯನ್ನೂ ಕೊಲ್ಲಲಾಗದಿದ್ದರೆ ಎಂಥ ಅವಮಾನ ಎಂಬ ಹತಾಶೆ ಮನವನ್ನು ಚುಚ್ಚಲಾರಂಭಿಸಿತು. ಆಗ ಕಾಣಿಸಿದ್ದು ಒಂದು ಋಷ್ಯಾಶ್ರಮ. ಅಲ್ಲಿಗೆ ತೆರಳಿದ ಪರೀಕ್ಷಿತ, ‘ಜಿಂಕೆ ಆಶ್ರಮದ ದಿಕ್ಕಿನಲ್ಲೇ ಓಡಿಬಂತು. ನೀವು ಕಂಡಿರಾ’ ಎಂದು ವಿಚಾರಿಸಿದ. ದುರದೃಷ್ಟ, ಆಶ್ರಮದಲ್ಲಿ ಧ್ಯಾನಸ್ಥರಾಗಿದ್ದ ಶಮೀಕ ಮಹರ್ಷಿ ಮೌನವ್ರತದಲ್ಲಿದ್ದರು. ಹಾಗಾಗಿ ಅವರು ಮೌನ, ಧ್ಯಾನ ಮುರಿಯಲಿಲ್ಲ. ಪರೀಕ್ಷಿತನಿಗೋ ಅಸಹನೆ, ನಾಲ್ಕೈದುಬಾರಿ ಕೇಳಿದರೂ ಮುನಿ ಉತ್ತರಿಸಲಿಲ್ಲ, ತನ್ನನ್ನು ಉಪಚರಿಸಲಿಲ್ಲ ಎಂದು ಮತ್ತಷ್ಟು ವ್ಯಗ್ರನಾದ. ಅಲ್ಲಿಯೇ ಹತ್ತಿರ ಬಿದ್ದಿದ್ದ ಸತ್ತ ಹಾವಿನ ಕಳೆಬರವನ್ನು ಮುನಿಯ ಕೊರಳಿಗೆ ಹಾಕಿ ಸಿಡುಕಿನಿಂದ ಹೊರಟುಹೋದ.

ಅದಾದ ಕೆಲಹೊತ್ತಿನಲ್ಲೇ ಆಶ್ರಮಕ್ಕೆ ಬಂದ ಶಮೀಕ ಮುನಿಯ ಪುತ್ರ ಶೃಂಗಿ, ತಂದೆ ಕೊರಳಲ್ಲಿದ್ದ ಸತ್ತ ಹಾವನ್ನು ಕಂಡು ಕೆಂಡಾಮಂಡಲವಾದ. ‘ಇಂಥ ಅಕಾರ್ಯ ಮಾಡಿದವನು ವಾರದೊಪ್ಪತ್ತಿನೊಳಗೆ ಹಾವು ಕಚ್ಚಿ ಸಾಯಲಿ’ ಎಂದು ಶಪಿಸಿಯೇ ಬಿಟ್ಟ. ರಾಜನಿಗೆ ವಿಚಾರ ತಿಳಿಯಿತು. ಛೇ ಎಂಥ ಅಪಚಾರ ಎಸಗಿ ಶಾಪಕ್ಕೆ ಗುರಿಯಾದೆ ಎಂದು ನೊಂದುಕೊಂಡ. ಇತ್ತ ರಾಜನನ್ನು ಹೇಗಾದರೂ ಬದುಕಿಸಲೇಬೇಕು, ಶಾಪ ಫಲಿಸಬಾರದು ಎಂದು ಪಣತೊಟ್ಟ ಮಂತ್ರಿಗಳು ದೊಡ್ಡ ಸ್ತಂಭವೊಂದರ ಮೇಲೆ ಅರಮನೆ ಕಟ್ಟಿ ಅದರೊಳಗೆ ರಾಜನನ್ನು ಬಚ್ಚಿಟ್ಟರು. ಅರಮನೆಯೊಳಗೆ ಅಪ್ಪಣೆಯಿಲ್ಲದೆ ಮನುಷ್ಯರಿರಲಿ, ಯಾವ ಪ್ರಾಣಿಯೂ ಹೋಗದಂತೆ ಕಾವಲು ಕಾದರು. ಆದರೆ, ಶಾಪ ಫಲಿಸಲೇಬೇಕಿತ್ತು. ಸರ್ಪರಾಜ ತಕ್ಷಕ ಪರೀಕ್ಷಿತನನ್ನು ಬಲಿಪಡೆಯಲು ಕಾಯುತ್ತಿದ್ದ. ತನ್ನ ಮೂಲಸ್ವರೂಪದಲ್ಲಿ ರಾಜನನ್ನು ತಲುಪುವುದು ಅಸಾಧ್ಯ ಎಂದು ಖಚಿತವಾದಾಗ ಅರಮನೆ ಸೇವಕರು ಒಯ್ಯುತ್ತಿದ್ದ ಹಣ್ಣಿನ ಬುಟ್ಟಿಯಲ್ಲಿ ಕ್ರಿಮಿಯ ರೂಪದಲ್ಲಿ ಸೇರಿಕೊಂಡು ಹಣ್ಣೊಂದನ್ನು ಕಚ್ಚಿದ. ದುರ್ದೈವವಶಾತ್ ಪರೀಕ್ಷಿತನೂ ಅದೇ ಹಣ್ಣು ತಿನ್ನಲು ಎತ್ತಿಕೊಂಡಾಗ ಕ್ರಿಮಿರೂಪದ ತಕ್ಷಕ ಮೂಲರೂಪ ತಾಳಿ ಕಚ್ಚಿದ. ಅಲ್ಲಿಗೆ ಶೃಂಗಿಯ ಶಾಪ ಫಲಿಸಿತ್ತು.

ಈ ಗಾಳಿಯ ಬೆನ್ನ ಮೇಲೆ/ ಮೂರ್ತಿಯೊಂದ ಕೆತ್ತಬೇಕು ಅದಕೆ ಎಲ್ಲ ಸಾಧನ/

ಈ ದೇಹಾ ಈ ವಿದ್ಯಾ/ ಜನನ ಮರಣ ವೇದನಾ (ವಿ.ಜಿ. ಭಟ್ಟ)

ವಿಧಿಯ ವಿರುದ್ಧ ಹೋಗಿ ಗೆದ್ದವರು ಯಾರೂ ಇಲ್ಲ. ಮನುಷ್ಯ ಸಂಕಲ್ಪ ಎಷ್ಟೇ ದೊಡ್ಡದಿದ್ದರೂ, ಅದಕ್ಕೂ ಮಿಗಿಲಾದದ್ದು ದೈವನಿಯಮ. ಒಳಿತಾದಾಗ ನನ್ನಿಂದಲೇ ಎಂದು ಬೀಗುವುದು, ಕೆಡುಕು ಘಟಿಸಿದಾಗ ಅನ್ಯರನ್ನು ದೂರುವುದು ಮನುಷ್ಯ ಸ್ವಭಾವ. ಮಹಾಭಾರತ ಯುದ್ಧ ನಡೆದ ಮೇಲೂ ‘ಇಷ್ಟೆಲ್ಲ ಸಾವು-ನೋವುಗಳಿಗೆ ನಾನೇ ಕಾರಣ. ನನ್ನ ರಾಜ್ಯದಾಸೆಯಿಂದ ಸ್ಮಶಾನಸದೃಶ ಭೂಪ್ರದೇಶವನ್ನು ಆಳುವಂತಾಯಿತು’ ಎಂದು ಯುಧಿಷ್ಠಿರ ನೊಂದುಕೊಂಡಿದ್ದ. ಆಗ ಭೀಷ್ಮ ಪಿತಾಮಹ ಕಥೆಯೊಂದನ್ನು ಉದಾಹರಿಸುವ ಮೂಲಕ ಧರ್ಮರಾಯನ ವ್ಯಾಕುಲತೆಯನ್ನು ಪರಿಹರಿಸುತ್ತಾರೆ. ಅರಣ್ಯದಲ್ಲಿ ತಪೋನಿಷ್ಠೆಯಿಂದ ಸಾತ್ವಿಕ ಜೀವನ ನಡೆಸುತ್ತಿದ್ದ ಗೌತಮಿಯ 6 ವರ್ಷದ ಪುತ್ರ ಹಾವು ಕಚ್ಚಿ ಸತ್ತುಹೋಗುತ್ತಾನೆ. ಕಾಡಿನಲ್ಲಿ ಆ ಹಾವನ್ನು ಹಿಡಿಯುವ ವ್ಯಾಧನೊಬ್ಬ ‘ಅಮಾಯಕ ಬಾಲಕನನ್ನು ಕಚ್ಚಿಕೊಂಡ ಈ ಸರ್ಪ ವಧೆಗೆ ಅರ್ಹ, ಸಾಯಿಸಲು ಅನುಮತಿ ಕೊಡು’ ಎಂದು ಗೌತಮಿ ಬಳಿ ಕೇಳುತ್ತಾನೆ. ‘ನನ್ನ ಮಗನ ಹಣೆಯಲ್ಲಿ ಹಾವು ಕಚ್ಚಿ ಸಾಯುವುದು ಬರೆದಿದ್ದರೆ, ಅದಕ್ಕೆ ಸೇಡು ತೀರಿಸಿಕೊಳ್ಳಲು ನನಗೆ ಯಾವ ಅಧಿಕಾರವಿದೆ? ಅಷ್ಟಕ್ಕೂ ದಂಡನೆ ವಿಧಿಸುವುದು ರಾಜನಿಗಿರುವ ಅಧಿಕಾರ’ ಎಂದು ಗೌತಮಿ ಮರುನುಡಿಯುತ್ತಾಳೆ. ‘ಆ ಬಾಲಕನ ವಿಧಿಯಲ್ಲಿ ಅಂಥ ಸಾವೇ ಬರೆದಿತ್ತು. ನಾನು ನಿಮಿತ್ತ ಮಾತ್ರ, ನಾನು ಕಚ್ಚದೇ ಹೋಗಿದ್ದರೂ, ಬೇರೊಂದು ಹಾವು ಕಚ್ಚಿ ಬಾಲಕ ಸಾಯುತ್ತಿದ್ದ, ನನ್ನನ್ನು ಕೊಲ್ಲಬೇಡ ಬಿಟ್ಟುಬಿಡು’ ಎಂದು ಆ ಸರ್ಪವೂ ವಾದಿಸುತ್ತದೆ. ಈ ಜಿಜ್ಞಾಸೆಯಲ್ಲಿ ಯಾರು ಸರಿ, ಯಾರು ತಪ್ಪು ಎಂದು ನಿಷ್ಕರ್ಶಿಸಲು ಸ್ವತಃ ಯಮಧರ್ಮನಿಗೂ ಸಾಧ್ಯವಾಗುವುದಿಲ್ಲ. ಮಹಾಭಾರತ ಯುದ್ಧದ ಸಾವು-ನೋವುಗಳಿಗೂ ಯá-ಧಿಷ್ಠಿರ ನಿಮಿತ್ತನೇ ಹೊರತು ನೇರ ಹೊಣೆಯಲ್ಲ ಎಂದು ಭೀಷ್ಮರು ಈ ರೀತಿ ವಿಶ್ಲೇಷಿಸುತ್ತಾರೆ.

ನೀನೇನು ತುಳಿದೆಯೋ, ಏನೇನು ಬೆಳೆದೆಯೋ/ ಏನೆಲ್ಲ ಕೂಡಿಸಿ ಕೂಡಿಸಿ ಕಳೆದೆಯೊ

ಯಾರು ಎಲ್ಲ ಲೆಕ್ಕವ ಬರೆದು ಇಟ್ಟವರು?

ಏನಯ್ಯ, ಕಾಲಪುರುಷ / ನಿನ್ನ ಮುಖದರುಶನವ ನೊಮ್ಮೆ ದಯಪಾಲಿಸಯ್ಯ (ಚನ್ನವೀರ ಕಣವಿ)

ಜೀವನದ ಹಾದಿಯಲ್ಲಿ ಗೊಂದಲಗಳು ಸಾವಿರ. ಯಾವುದು ಸರಿ? ಯಾವುದು ತಪ್ಪು? ಇತ್ಯಾದಿ ಪ್ರಶ್ನೆಗಳು ನಿರಂತರ. ಅನೇಕ ಬಾರಿ ನಮ್ಮ ಸಹಜ ಪ್ರವೃತ್ತಿ ಬೇರೆ ಯವರ ದೃಷ್ಟಿಯಲ್ಲಿ ವಿಪರೀತವಾಗಿರುತ್ತದೆ. ಜಗತ್ತಿನ ಸೃಷ್ಟಿಯಲ್ಲಿ ನೋಡುವವರ ದೃಷ್ಟಿಗೆ ಅನುಗುಣವಾಗಿ ಎಲ್ಲವೂ ವಿಭಿನ್ನ, ವಿಶಿಷ್ಟ.

ಮೇಲೊಂದು ಗರುಡ ಹಾರುತಿಹುದು / ಕೆಳಗದರ ನೆರಳು ಓಡುತಿಹುದು

ಅದಕೊ ಅದರಿಚ್ಛೆ ಹಾದಿ / ಇದಕು ಹರಿದತ್ತ ಬೀದಿ (ಪುತಿನ)

ಬದುಕೆಂದರೆ ಹಾಗೆ. ಲೌಕಿಕ ಜಗತ್ತಿನಲ್ಲಿ ಎಲ್ಲವನ್ನೂ ಚಿಂತನೆ, ಆಲೋಚನೆಯಿಂದ ಯೋಜನಾಬದ್ಧವಾಗಿ ಮಾಡಬಹುದು. ಆದರೆ, ಸಾವನ್ನು ಮಾತ್ರ
ನಮ್ಮಿಚ್ಛೆಯಂತೆ ನಿರ್ಧರಿಸುವುದು ಸಾಧ್ಯವಿಲ್ಲ.

ಎನಗೊಂದು ಮಾತು ಹೇಳದೆ ಹೋದ ಹಂಸ/ ತನುವಿನೊಳಗೆ ಅನುದಿನ ವಿದ್ದು/ ಜ್ವಾಲಾಧರವೆಂಬೊ ಮಾಳಿಗೆ ಮನೆಯಲ್ಲಿ/ ಈಹೋದು ಒಂಭತ್ತು ಬಾಗಿಲ (ಪುರಂದರದಾಸರು)

ದೇಹದೊಳಗೆ ಇಷ್ಟು ಕಾಲ ವಾಸಿಸಿದ ಜೀವ, ಹೋಗುವ ಹೊತ್ತಲ್ಲಿ ಒಂದು ಮಾತು ಹೇಳಿಹೋಗಬಾರದಿತ್ತೇ ಎಂದು ದಾಸರು ಪ್ರಶ್ನಿಸುತ್ತಾರೆ. ಗಾಳಿ ಬೀಸಿ ಮರದ ಎಲೆಗಳು ಹಾರಿಹೋಗುವಾಗ ತಾಯಿ ಬೇರಿಗೆ, ಆಧರಿಸಿದ ಮರಕ್ಕೆ ಆ ಎಲೆಗಳು ಹೇಳಿಹೋಗುವುವೇ? ಕಾಲ ಬಂದಾಗ ಯಾರ ಅಪ್ಪಣೆಗೂ ಕಾಯದೆ ಹೋಗುವುದು ಜೀವದ ನಿಯಮ. ಅದೇ ವಿಧಿ ಎಂದು ದಾಸರು ಸಮರ್ಥನೆಯನ್ನೂ ಒದಗಿಸುತ್ತಾರೆ. ಹಾಗಾದರೆ, ಇರುವ ಜೀವಿತ ಕಾಲದಲ್ಲಿ ಜೀವನವನ್ನು ಸಾರ್ಥಕವಾಗಿಸಿಕೊಳ್ಳುವುದು ಹೇಗೆ? ಅದಕ್ಕೂ ಯೋಗಿಗಳ ಬಳಿ, ಸಿದ್ಧಸಾಧಕರ ಬಳಿ ಉತ್ತರವಿದೆ. ಸಿದ್ಧಪುರುಷರೊಬ್ಬರ ಮನೆಗೆ ಇಳಿಸಂಜೆ ಹೊತ್ತಿನಲ್ಲಿ ಶಿಷ್ಯನೊಬ್ಬ ಬಂದು ಬಾಗಿಲು ಬಡಿಯುತ್ತಾನೆ. ‘ಯಾರದು’ ಎಂದು ಒಳಗಿನಿಂದ ಪ್ರಶ್ನೆ ಬರುತ್ತದೆ. ‘ಗುರುಗಳೇ ನಾನು’ ಎಂದು ಶಿಷ್ಯ ನುಡಿಯುತ್ತಾನೆ. ಆದರೆ, ಎಷ್ಟು ಹೊತ್ತಾದರೂ, ಮತ್ತೆಷ್ಟು ಬಾಗಿಲು ಬಡಿದರೂ ತೆರೆಯುವುದೇ ಇಲ್ಲ.

ಬೇಸರದಿಂದ ಹಿಂದಿರುಗುವಾಗ ಮತ್ತೊಬ್ಬ ಹಿರಿಯ ಶಿಷ್ಯ ಎದುರಿಗೆ ಸಿಗುತ್ತಾನೆ. ಈತ ಬೇಸರದಿಂದ ಹೀಗಾಯಿತು ಎಂದು ಹೇಳಿಕೊಂಡಾಗ ಹಿರಿಯ ಶಿಷ್ಯ ಸಮಾಧಾನ ಮಾಡಿ ಮತ್ತೆ ಗುರುವಿನ ಮನೆಗೆ ಕರೆತರುತ್ತಾನೆ. ಈ ಬಾರಿ ಬಾಗಿಲು ಬಡಿದಾಗ ಮತ್ತೆ ಯಾರೆಂಬ ಪ್ರಶ್ನೆ ಬರುತ್ತದೆ. ಈ ಸಂದರ್ಭದಲ್ಲಿ ಹಿರಿಯ ಶಿಷ್ಯ ‘ನೀವು’ ಎಂದು ಉತ್ತರಿಸುತ್ತಾನೆ. ಕೂಡಲೇ ಬಾಗಿಲು ತೆರೆಯುತ್ತದೆ. ಅದರರ್ಥ ದೈವತ್ವಕ್ಕಿರಲಿ, ಗುರುತತ್ವಕ್ಕಿರಲಿ ಆತ್ಮ ಸಮರ್ಪಣೆ ಎಂದರೆ ನಾನೆಂಬ ಭಾವವನ್ನು ಸಂಪೂರ್ಣವಾಗಿ ಇಲ್ಲ ವಾಗಿಸಿಕೊಳ್ಳುವುದು. ಪ್ರೇಮದ ಹಾದಿಯಲ್ಲಿ ಜೋಡಿ ರಸ್ತೆ ಗಳಿರುವುದಿಲ್ಲ, ಒಂದೇ ರಸ್ತೆ. ದೇಹ ಎಷ್ಟಿದ್ದರೂ, ಆತ್ಮ ಒಂದೇ ಎಂಬ ಏಕತ್ವ ಅದು ಎಂದು ರಾಜಿಂದರ್ ಸಿಂಗ್ ವಿಶ್ಲೇಷಿಸುತ್ತಾರೆ.

ಹಾಗಿದ್ದರೆ, ದೈವ ಸಾಕ್ಷಾತ್ಕಾರ ಹೇಗೆ? ದೇವರನ್ನು ತಿಳಿಯುವುದು ಹೇಗೆ? ನಮ್ಮನ್ನು ನಾವು ಅರಿಯುವುದು ಹೇಗೆ? ಒಬ್ಬಾತ ಪ್ರತೀ ದಿನ ದೇವರಿಗೆ ಪ್ರಾರ್ಥಿಸುವ ಸಂದರ್ಭದಲ್ಲಿ, ‘ದೇವರೇ, ನನ್ನೊಂದಿಗೆ ಮಾತನಾಡು’ ಎಂದು ಮೊರೆಯಿಡುತ್ತಿದ್ದ. ಅದೊಂದು ದಿನ ಆತ ಪ್ರಾರ್ಥಿಸುವ ಸಂದರ್ಭದಲ್ಲಿ ಮರದ ಮೇಲಿದ್ದ ಪಕ್ಷಿ ಚಿಲಿಪಿಲಿಗುಟ್ಟಿ ಹಾಡುತ್ತಿತ್ತು. ಆದರೆ, ಆತ ಕೇಳಿಸಿಕೊಳ್ಳಲೇ ಇಲ್ಲ. ‘ದೇವರೇ ನನ್ನೊಂದಿಗೆ ಮಾತನಾಡು’ ಎಂದು ಬೇಡುತ್ತಲೇ ಇದ್ದ. ಆಗ ಏಕಾ ಏಕಿ ಗುಡುಗು, ಮಿಂಚುಗಳು ಆಗಸದಲ್ಲಿ ಕಾಣಿಸಿಕೊಂಡವು. ಆತ ಗಮನಿಸಲೇ ಇಲ್ಲ. ‘ದೇವರೇ ನಿನ್ನನ್ನು ನೋಡಬೇಕು, ದರ್ಶನ ನೀಡು’ ಎಂದು ಆತ ಪ್ರಾರ್ಥಿಸುತ್ತಿರುವಾಗ ಆಕಾಶದಲ್ಲಿ ನಕ್ಷತ್ರವೊಂದು ಪ್ರಜ್ವಲಿಸುತ್ತಿತ್ತು. ಆದರೆ, ಆತನ ದೃಷ್ಟಿ ಬೇರೆಲ್ಲೋ ಇತ್ತು.

ದೇಗುಲಕ್ಕೆ ಹೋಗುವಾಗ ಆತ ಮನಸ್ಸಿನಲ್ಲೇ ಪ್ರಾರ್ಥಿಸುತ್ತಿದ್ದ. ‘ದೇವರೇ ನನ್ನನ್ನು ರ್ಸ³ಸು, ನೀನು ನನ್ನೊಂದಿಗಿರುವುದು ನನಗೆ ತಿಳಿಯಬೇಕು’ ಎಂದು ಹೇಳುತ್ತಿರುವಾಗಲೇ ಚಿಟ್ಟೆಯೊಂದು ಹಾರಿಬಂದು ಆತನ ಭುಜದ ಮೇಲೆ ಕುಳಿತಿತು. ಆದರೆ, ಆತ ಭುಜ ಕೊಡವಿಕೊಂಡು ಮುಂದೆ ಸಾಗಿದ. ಎಷ್ಟು ಬೇಡಿದರೂ ದೇವರು ಪ್ರತ್ಯಕ್ಷನಾಗುತ್ತಿಲ್ಲ ಎಂಬ ಹತಾಶೆಯಿಂದ ಆತ ‘ದೇವರೇ, ನನಗೆ ಸಹಾಯ ಮಾಡು’ ಎಂದು ಮೊರೆಯಿಡುತ್ತಿದ್ದ. ಆ ದಿನವೇ ಆತನಿಗೆ ಗೆಳೆಯನಿಂದ ಪತ್ರವೊಂದು ಬಂದಿತ್ತು. ‘ದೇವರನ್ನು ಕಾಣುವುದು ಹೇಗೆ ಎಂಬುದನ್ನು ನಾನು ಕಂಡುಕೊಂಡಿದ್ದೇನೆ’ ಎಂದು ಸ್ನೇಹಿತ ಬರೆದಿದ್ದ. ಆದರೆ, ಈತ ಪತ್ರವನ್ನು ಓದದೆಯೇ ಹರಿದುಹಾಕಿದ.

‘ದೇವರೇ ಕೊನೆಯದಾಗಿ ಬೇಡುತ್ತಿದ್ದೇನೆ. ಇದೇ ಕೊನೆ. ಹೇಗಾದರೂ ನನ್ನೊಂದಿಗೆ ಸಂಭಾಷಿಸು’ ಎಂದು ಆತ ಬೇಡುತ್ತಲೇ ಇದ್ದ. ಕೊನೆಗೂ ದೇವರು ಆತನ ಕನಸಿನಲ್ಲಿ ಕಾಣಿಸಿಕೊಂಡು ಹೇಳಿದ. ‘ಮಗೂ, ಸದಾಕಾಲ ನಾನು ನಿನ್ನೊಂದಿಗೆ ಸಂಭಾಷಿಸುತ್ತಲೇ ಇದ್ದೆ. ಆದರೆ, ನೀನು ನಿರೀಕ್ಷಿಸಿದ ರೂಪದಲ್ಲಿ ನಾನು ಕಾಣಿಸಿಕೊಳ್ಳಲಿಲ್ಲ. ಹಾಗಾಗಿ ನಿನ್ನ ಅರಿವಿಗೆ ಬರಲಿಲ್ಲ’. ದೇವರು ಸದಾ ಕಾಲ ನಮ್ಮೊಂದಿಗೇ ಇರುತ್ತಾನೆ. ಆದರೆ, ನಾವು ಅರಿತುಕೊಳ್ಳಬೇಕಷ್ಟೇ

ಆವ ರೂಪದೊಳು ಬಂದರು ಸರಿಯೇ/ ಆವವೇಷದೊಳು ನಿಂದರು ಸರಿಯೇ

ನೇಸರುದಯದೊಳು ಬಹೆಯಾ ಬಾ / ತಿಂಗಳಂದದಲಿ ಬಹೆಯಾ ಬಾ

ತೆರೆದಿದೆ ಮನೆ ಓ ಬಾ ಅತಿಥಿ

(ಕುವೆಂಪು)

ತಾತ್ವಿಕ ನೆಲೆಗಟ್ಟಿನಲ್ಲಿ ಲೋಕದ, ಬದುಕಿನ ವ್ಯಾಖ್ಯಾನ ಬೇರೆ. ಆದರೆ, ಲೋಕ ರೂಢಿಯಂತೆ ಎಲ್ಲರೊಳಗೊಂದಾಗಿ ಬದುಕುವ ಸಂದರ್ಭದಲ್ಲಿ ನಮ್ಮ ಬದುಕಿನ ರೀತಿ ನಾವು ಬದುಕುವ ರೀತಿಯಿಂದಲೇ ನಿರ್ಧಾರವಾಗುತ್ತದೆ. ಹೇಗೆ, ಯಾವ ರೀತಿ ಬದುಕಬೇಕೆನ್ನುವುದು ನಮ್ಮ ಆಸೆಗೆ, ಅವಕಾಶಕ್ಕೆ, ಆಲೋಚನೆಗೆ ಬಿಟ್ಟಿದ್ದು. ಒಳಿತಿ ನಿಂದ ಒಳಿತು, ಕೆಡುಕಿನಿಂದ ಕೆಡುಕು. ಆಯ್ಕೆ ನಮ್ಮದು, ಉಳಿದಿದ್ದು ವಿಧಿಲಿಖಿತ..

ಕಾಣದಿಹ ಕೈಯೊಂದು ಸೂತ್ರ ಹಿಡಿದಿದೆ

ಆಡಿಸಿದೆ, ಕಾಡಿಸಿದೆ, ಅಳಿಸಿ ನಗುತಿದೆ. (ಚಿ.ಉದಯಶಂಕರ್)

Courtesy whatsapp msg

Tuesday 7 January 2020

ಸಹನಂ ಅಮೃತಂ ಫಲಂ

*ಸಹನಂ ಅಮೃತಂ ಫಲಂ*

ಇಂದು ನಮ್ಮೆಲ್ಲರಿಗೂ ಬೇಕಿರುವುದು ತಕ್ಷಣದ ಸಂತೋಷ. ತುರ್ತು ಜನಪ್ರಿಯತೆ, ಅರ್ಜೆಂಟ್ ಶ್ರೀಮಂತಿಕೆ. ಹೇಳಿಕೇಳಿ ಇದು ಇನ್​ಸ್ಟಂಟ್ ಯುಗ. ಹಾಗಾಗಿ ಎಲ್ಲವೂ ನಮಗೀಗ ಸುಲಭವಾಗಿ ದಕ್ಕಬೇಕು, ಬೇಗನೆ ಸಿಗಬೇಕು. ಒಂದು ಯೂಟ್ಯೂಬ್ ವೀಡಿಯೋ ಶುರುವಾಗಲು ಹತ್ತು ಸೆಕೆಂಡುಗಳಿಗಿಂತ ಜಾಸ್ತಿ ತೆಗೆದುಕೊಂಡರೆ ನೋಡುವ ತಾಳ್ಮೆ ಇಲ್ಲದೇ ಮುಂದಿನ ವೀಡಿಯೋ ಸ್ಕ್ರೋಲ್ ಮಾಡುವ ನಮಗೆ, ಟ್ರಾಫಿಕ್​ನಲ್ಲಿ ಹಸಿರುದೀಪ ಹತ್ತಿದಾಗ ಮುಂದಿನವರು ವಾಹನ ಚಲಾಯಿಸಲು ಇಪ್ಪತ್ತು ಸೆಕೆಂಡ್ ತಡಮಾಡಿದರೆ ಕೆಳತುಟಿಯನ್ನು ಹಲ್ಲಿಂದ ಕಚ್ಚಿಹಿಡಿದು ಮುಖ ಸಿಂಡರಿಸುವ ನಮಗೆ, ಮನೆಯಲ್ಲಿ ನೀರು ಕೇಳಿದಾಗ ತರಲು ಮೂವತ್ತು ಸೆಕೆಂಡ್ ತಡವಾದರೆ ಅಸಹನೆಯಿಂದ ಕುದಿಯುವ ನಮಗೆ ತಾಳ್ಮೆ ಎಂಬುದು ಮರೀಚಿಕೆಯಾಗಿಬಿಟ್ಟಿದೆ. ಮತ್ತು ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ತಾಳ್ಮೆರಹಿತ ಮನಸ್ಥಿತಿ ಹೊಂದಿದವರಾಗಿದ್ದಾರೆ. ಪರಿಣಾಮ ಗುರಿಸಾಧನೆಗಾಗಿ ದೀರ್ಘಾವಧಿಯ ಕಾಲ ಶ್ರಮ ಪಡುವ ಮನಸ್ಥಿತಿ ಮಾಯವಾಗುತ್ತಿದೆ. ಕಾರಣವಿಷ್ಟೇ ಜನರು ದೀರ್ಘಕಾಲದ ಲಾಭಕ್ಕಿಂತ ತಕ್ಷಣದ ಸಂತಸವನ್ನು ಆಶಿಸುತ್ತಾರೆ.


ಕ್ಷಣಿಕ ಆಮಿಷಗಳಿಗೆ ಬಲಿ ಬೀಳದವರು ಅದ್ಭುತಗಳನ್ನು ಸಾಧಿಸುತ್ತಾರೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ. ಇದನ್ನು ‘ಡಿಲೇಯ್್ಡ ಗ್ರಾಟಿಫಿಕೇಶನ್’ ಎನ್ನುತ್ತಾರೆ. ಅಂದರೆ ಕನ್ನಡದಲ್ಲಿ ‘ಮುಂದೂಡಲ್ಪಟ್ಟ ಸಂತೃಪ್ತಿ’ ಎನ್ನಬಹುದೇನೋ. ಅಮೆರಿಕದಲ್ಲಿ ಇದನ್ನು ಸಾಬೀತುಪಡಿಸಲು ಒಂದು ಪ್ರಯೋಗ ಮಾಡಲಾಯಿತು. ಸ್ಟಾನ್​ಫೋರ್ಡ್ ವಿಶ್ವವಿದ್ಯಾಲಯದ ವಾಲ್ಟರ್ ಮಿಶೆಲ್ ಎಂಬ ಮನಃಶಾಸ್ತ್ರಜ್ಞರ ನೇತೃತ್ವದ ತಂಡ 1960ರ ದಶಕದಲ್ಲಿ ಒಂದು ಪ್ರಯೋಗ ಮಾಡಿತು. ನಾಲ್ಕೋ ಐದೋ ವರ್ಷದ ಒಂದು ಮಗುವನ್ನು ಕೋಣೆಯಲ್ಲಿ ಕೂರಿಸಿ ಅದರ ಕೈಗೆ ಒಂದು ಮಾರ್ಶ್​ವುಲ್ಲೋ(ಕ್ಯಾಂಡಿ ತರಹದ ಸಿಹಿ ತಿನಿಸು) ಕೊಡುವುದು. ಕೊಟ್ಟು ಆ ಮಗುವಿಗೆ ಎರಡು ಆಯ್ಕೆ ಕೊಡುವುದು. ಮೊದಲನೆಯದು ಆ ಮಗು ತಕ್ಷಣ ಅದನ್ನು ತಿನ್ನಬಹುದು. ಎರಡನೆಯದು ಒಂದಿಷ್ಟು ಸಮಯ ನಿಗದಿಗೊಳಿಸಿ (ಹೆಚ್ಚೆಂದರೆ ಹದಿನೈದು ನಿಮಿಷ), ಆ ಸಮಯದವರೆಗೆ ಸಿಹಿಯನ್ನು ತಿನ್ನದೇ ಕಾದರೆ ಗಿಫ್ಟ್ ಕೊಡುತ್ತೇನೆಂದು ಹೇಳುವುದು. ಆ ಗಿಫ್ಟ್ ಇನ್ನೊಂದು ಸಿಹಿತಿಂಡಿಯೋ, ಕುಕೀ ಏನಾದರೂ ಆಗಿರಬಹುದು. ಆ ಮಗುವನ್ನು ಕೋಣೆಯಲ್ಲಿ ಬಿಟ್ಟು ಹೊರಬರಲಾಗುತ್ತಿತ್ತು. ಬಾಯಲ್ಲಿ ನೀರೂರಿಸುವ ಸಿಹಿ ಕೈಯಲ್ಲಿ, ಮೇಲಾಗಿ ನೋಡುವವರು ಯಾರೂ ಇಲ್ಲ! ಚಿಕ್ಕ ಮಕ್ಕಳು ಬಹಳ ಜನ ಪಟಕ್ಕನೆ ಬಾಯಲ್ಲಿ ಹಾಕಿಕೊಳ್ಳುತ್ತಿದ್ದರು, ಇನ್ನು ಕೆಲವರು ಎರಡು ಮೂರು ನಿಮಿಷ ಕಾದು ತಡೆಯಲಾರದೆ ತಿಂದು ಬಿಡುತ್ತಿದ್ದರು. ಮತ್ತೂ ಕೆಲವು ಮಕ್ಕಳು ಆರೇಳು ನಿಮಿಷ ಕಾಯುತ್ತಿದ್ದರು. ಆದರೆ ಕೆಲ ದೃಢಮನಸ್ಸಿನ ಪೋರಪೋರಿಯರು ಮನಸ್ಸನ್ನು ನಿಗ್ರಹಿಸಿ ಬಹುಮಾನ ಗೆದ್ದೇಬಿಟ್ಟರು. ಈ ಪ್ರಯೋಗಕ್ಕೆ ಒಳಪಟ್ಟ ಎಲ್ಲ ಮಕ್ಕಳ ಮಾಹಿತಿಯನ್ನೂ ಸತತವಾಗಿ ಅವರು ದೊಡ್ಡವರಾದ ಮೇಲೂ ಪಡೆಯಲಾಯಿತು. ಅಧ್ಯಯನದ ಪ್ರಕಾರ ಯಾರು ಹೇಳಿದಷ್ಟು ಸಮಯ ಕಾದು ಬಹುಮಾನ ಗಿಟ್ಟಿಸಿಕೊಂಡರೋ ಆ ಮಕ್ಕಳು ಮುಂದೆ ಅತ್ಯುತ್ತಮ ಶಿಕ್ಷಣ ಪಡೆದರು, ಉತ್ತಮ ಉದ್ಯೋಗ ಗಿಟ್ಟಿಸಿದರು, ಜೀವನದಲ್ಲಿ ಯಶಸ್ಸು ಕಂಡರು. ಅವರ ಆರೋಗ್ಯ ಚೆನ್ನಾಗಿತ್ತು, ವೈಯಕ್ತಿಕ ಸಂಬಂಧಗಳು ಚೆನ್ನಾಗಿದ್ದವು. ಈ ಪ್ರಯೋಗಕ್ಕೆ ವಿಭಿನ್ನ ಹಿನ್ನೆಲೆಯ ಮಕ್ಕಳನ್ನು ಆಯ್ದುಕೊಳ್ಳಲಾಗಿತ್ತು. ಮಕ್ಕಳ ಆರ್ಥಿಕ ಹಿನ್ನೆಲೆಗಿಂತ ಅವರ ವಿಲ್​ಪವರ್ ಅತ್ಯುತ್ತಮ ಫಲಿತಾಂಶಕ್ಕೆ ಕಾರಣವಾಗುತ್ತದೆಂಬ ತೀರ್ಮಾನಕ್ಕೆ ಬರಲಾಯಿತು.

ಈ ರೀತಿಯ ಪ್ರಯೋಗಗಳ ಫಲಿತಾಂಶ ಹೀಗೇ ಎಂದು ಹೇಳಲಾಗುವುದಿಲ್ಲ ಬಿಡಿ, ಎಲ್ಲದಕ್ಕೂ ಅಪವಾದ ಇದ್ದೇ ಇರುತ್ತದೆ. ಆದರೆ ಒಂದಂತೂ ನಿಜ ಯಾರು ಕ್ಷಣಿಕ ಖುಶಿಯನ್ನು ಅಂದರೆ ಈಗಿನ ಯುವಜನರ ಭಾಷೆಯಲ್ಲಿ ‘ಎಂಜಾಯ್’ ಮಾಡುವುದನ್ನು ಮುಂದೂಡುತ್ತಾರೋ ಅವರು ಬದುಕಿನಲ್ಲಿ ಯಶಸ್ವಿಯಾಗುವುದಂತೂ ಖಂಡಿತ. ಈ ರೀತಿಯ ತತಕ್ಷಣದ ಸಂತೋಷದಿಂದ ತೃಪ್ತಿ ಪಡೆಯುವುದನ್ನು ‘ಇನಸ್ಟಂಟ್ ಗ್ರಾಟಿಫಿಕೇಷನ್’ ಎನ್ನುತ್ತಾರೆ. ಚಿಕ್ಕವರ ಮೇಲೆ ಪ್ರಯೋಗ ಮಾಡಿದಂತೆ ದೊಡ್ಡವರ ಮೇಲೂ ಪ್ರಯೋಗ ಮಾಡಲಾಯಿತು. ಮುಂದಿನವಾರ ಪೂರ್ತಿ ನಿಮಗೆ ಉಚಿತವಾಗಿ ಸೇಬು ಅಥವಾ ಚಾಕಲೇಟ್ ಕೊಡಲಾಗುವುದೆಂದು ಹೇಳಿದಾಗ ಹತ್ತಕ್ಕೆ ಆರು ಜನ ಸೇಬನ್ನೂ, ನಾಲ್ಕು ಜನ ಚಾಕಲೇಟ್ ಅನ್ನೂ ಆಯ್ದುಕೊಂಡರು. ಆದರೆ ತಕ್ಷಣ ತಿನ್ನಲು ಕೊಡುತ್ತೇವೆ ಎಂದಾಗ ಇಬ್ಬರು ಮಾತ್ರ ಸೇಬು ಆಯ್ಕೆ ಮಾಡಿಕೊಂಡರೆ ಉಳಿದ ಎಂಟು ಜನ ಚಾಕಲೇಟ್ ಆಯ್ದುಕೊಂಡರು. ಅಂದರೆ ಮುಂದಿನ ವಾರದ ಆಯ್ಕೆ ಮಾಡುವಾಗ ಬಹಳಜನ ಆರೋಗ್ಯಕರ ಆಯ್ಕೆಯನ್ನೇ ಮಾಡಿದರು. ಆದರೆ ತಕ್ಷಣದ ಆಯ್ಕೆಯಾಗಿ ಚಾಕಲೇಟಿಗೆ ಶರಣಾದರು. ಚಾಕಲೇಟ್ ತಿನ್ನುವ ತುಡಿತವನ್ನು ನಿಯಂತ್ರಿಸಲು ಎಂಬತ್ತು ಪ್ರತಿಶತ ಜನರಿಗೆ ಆಗಲಿಲ್ಲ. ಇದರರ್ಥ ದೂರದ ಆಯ್ಕೆ ಮಾಡುವಾಗ ನಾವು ಒಳ್ಳೆಯ ಆಯ್ಕೆಯನ್ನೇ ಮಾಡುತ್ತೇವೆ. ಉದಾಹರಣೆಗೆ ಓದುವ ಟೈಂ ಟೇಬಲ್ ಹಾಕಿಕೊಳ್ಳುವಾಗ ಅದು ಹತ್ತು ಹನ್ನೆರಡು ಗಂಟೆಯದ್ದು. ಅದನ್ನು ಪಾಲಿಸುವಾಗ ಎರಡು ಗಂಟೆ ಕೂರುವುದೂ ಕಷ್ಟ. ಬಹಳ ಜನರ ವಾಕಿಂಗ್​ಪ್ಲಾನ್ ಕೂಡ ಇದೇ ಥರ. ವಾರದಲ್ಲಿ ಐದು ದಿನದ ಯೋಜನೆ ಕೊನೆಗೆ ತಿಂಗಳಿಗೊಮ್ಮೆಯೂ ಜಾರಿಗೆ ಬರುವುದಿಲ್ಲ. ಇನ್ನು ಮಹಾನಗರಗಳಲ್ಲಿ ಜಿಮ್‌.. ತಿಂಗಳ ಹಣ ಕಟ್ಟಿ ವ್ಯರ್ಥ ಮಾಡುವವರೇ ಬಹಳ. ಇದರಲ್ಲಿ ಮೊಬೈಲ್ ಗೇಮ್ ಆಡುವುದು, ಫೇಸ್​ಬುಕ್​ನಲ್ಲೇ ಮುಳುಗಿರುವುದು, ಅತಿಯಾಗಿ ಸಿನಿಮಾ ನೋಡುವುದು, ಪದೇಪದೆ ಪಾರ್ಟಿ ಮಾಡುವುದು, ಕಣ್ಣಿಗೆ ಬಿದ್ದ ಹೊಸವಿನ್ಯಾಸದ ಬಟ್ಟೆಯನ್ನೆಲ್ಲ ಖರೀದಿಸುವುದು, ಕುಡಿತ, ದುರಭ್ಯಾಸಗಳು… ಹೀಗೆ ಆ ಕ್ಷಣಕ್ಕೆ ಸಂತೋಷ ಕೊಡುವಂತಹ ಎಲ್ಲ ಸಂಗತಿಗಳೂ ಬರುತ್ತವೆ. ಬದುಕೆಂದರೆ ಇವೇ ಎಂಬುದು ಬಹಳ ಜನರ ಅಭಿಪ್ರಾಯ. ಜೀವನ ಇಷ್ಟಕ್ಕೆ ಸೀಮಿತವಾಗಿಲ್ಲ ಎಂಬ ಬೇಸಿಕ್ ವಿಚಾರವೇ ಬಹಳ ಮಂದಿಗೆ ಅರ್ಥವಾಗುತ್ತಿಲ್ಲ.

ನಮ್ಮ ಯುವಜನರ ಬಹುದೊಡ್ಡ ಸಮಸ್ಯೆ ಅವರಿಗೆ ಬದುಕಿನ ಎಲ್ಲ ಸಂತಸಗಳೂ ಬೇಕು. ಆದರೆ ಸಮಸ್ಯೆಯೇನೆಂದರೆ ಅದಕ್ಕಾಗಿ ತಾಳ್ಮೆಯಿಂದ ಕಾಯುವಷ್ಟು, ಗುರಿಸಾಧನೆಗಾಗಿ ಕಷ್ಟಪಡುವಷ್ಟು ವ್ಯವಧಾನವಿರುವವರು ಕಡಿಮೆ. ಕಷ್ಟಪಟ್ಟಷ್ಟೂ ಸಾಧನೆಗೆ ಮತ್ತಷ್ಟು ಮೆರುಗು. ಹೊಟ್ಟೆ ತುಂಬಿದಾಗ ತಿಂದರೆ ಮೃಷ್ಟಾನ್ನವೂ ರುಚಿಸದು. ಆದರೆ ಹಸಿವಾದರೆ ಊಟದ ಮಜವೇ ಬೇರೆ. ಅದೇ ರೀತಿ ಹಗಲಿರುಳು ಕಷ್ಟಪಟ್ಟು ಯಶಸ್ಸಿನ ಮೆಟ್ಟಿಲೇರಿದರೆ ಸಿಗುವ ಆನಂದ ಅಪರೂಪದ್ದು. ಯಶಸ್ಸಿಗಾಗಿ ಶಾರ್ಟ್​ಕಟ್​ಗಳನ್ನು ಹುಡುಕುವುದು ಮೂರ್ಖತನ. ಕೈ ಕೆಸರಾಗದೇ ಬಾಯಿ ಮೊಸರಾಗುವುದು ಕನಸಿನಲ್ಲಿ ಮಾತ್ರ ಸಾಧ್ಯ.

ವಿಲ್​ಪವರ್ ಅಥವಾ ಮನೋಬಲ ಎಂಬುದು ಯಶಸ್ಸಿಗೆ ಬೇಕೇ ಬೇಕಾದ ಸಂಗತಿ. ಬಹಳ ಮಂದಿ ತಮ್ಮ ಮೂಡ್​ಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಾರೆ. ಖುಶಿಯಾದಾಗ ಒಂದು ಗಂಟೆ ಜಾಸ್ತಿ ಓದುವುದು, ಬೇಜಾರಾದಾಗ ಮೂರು ದಿನ ಪುಸ್ತಕ ಮುಟ್ಟದಿರುವುದು ಸಾಮಾನ್ಯ. ಆದರೆ ತಕ್ಷಣದ ಖುಶಿಗಳಿಗೆ ಆಸೆಪಡದೆ ಆಕಾಶ ಕಳಚಿ ಬಿದ್ದರೂ ತನ್ನ ಕೆಲಸ ತಾನು ಮಾಡಿಕೊಂಡು ಹೋಗುವವರನ್ನು ನೋಡುತ್ತೇವೆ. ಇಂಥವರೇ ಸಾಧಕರಾಗುತ್ತಾರೆ, ವಿಶಿಷ್ಟವಾದುದನ್ನು ಸಾಧಿಸುತ್ತಾರೆ. ಹೊರಗಿನ ಸಂಗತಿಗಳು ನಮ್ಮ ದೈನಂದಿನ ಕಾರ್ಯವನ್ನು ಪ್ರಭಾವಿತಗೊಳಿಸದಂತೆ ಕಾದುಕೊಳ್ಳುವುದು ವಿಲ್​ಪವರ್. ಆದರೆ ಈ ಮನೋಬಲವನ್ನು ಬೆಳೆಸಿಕೊಳ್ಳುವುದು ಅಷ್ಟು ಸುಲಭವಲ್ಲ. ಮರ್ಕಟ ಮನಸ್ಸನ್ನು ಹಿಡಿದಿಡುವ ಕಲೆಯನ್ನು ಕಷ್ಟಪಟ್ಟೇ ಬೆಳೆಸಿಕೊಳ್ಳಬೇಕು. ಬೆಳಗ್ಗೆ ಹತ್ತು ನಿಮಿಷ ಒಂದೆಡೆ ಕಣ್ಮುಚ್ಚಿ ಕುಳಿತು ದೀರ್ಘ ಉಸಿರಾಟ ನಡೆಸುವುದು ಸಹಕಾರಿ. ಸಣ್ಣ ಸಣ್ಣ ಗುರಿಗಳನ್ನು ಹಾಕಿಕೊಂಡು ಅದನ್ನು ಸಾಧಿಸಲು ಪ್ರಯತ್ನಿಸಬೇಕು. ಉದಾಹರಣೆಗೆ ಒಂದು ಪಾಠ ಓದಿ ಆಗುವವರೆಗೆ ತಿಂಡಿ ತಿನ್ನುವುದಿಲ್ಲ ಎಂದುಕೊಳ್ಳುವುದು, ಒಂದು ದಿನ ಟಿವಿ ನೋಡದೇ ಇರುವುದು, ಒಂದು ಚೂರೂ ಮನಸ್ಸಿಲ್ಲದಿದ್ದರೂ ಕೋಣೆಯನ್ನು ಶುಚಿಗೊಳಿಸುವುದು, ಮಧ್ಯಾಹ್ನವಿಡೀ ಮಲಗಬೇಕು ಎನ್ನಿಸಿದಾಗಲೇ ಬಟ್ಟೆ ತೊಳೆಯುವುದನ್ನೋ, ಇಸ್ತ್ರಿ ಮಾಡುವುದನ್ನೋ ಮಾಡುವುದು ಹೀಗೆ ನಮಗೆ ಇಷ್ಟವಿಲ್ಲದ ಆದರೆ ಅಗತ್ಯವಾದ ಚಿಕ್ಕಪುಟ್ಟ ಕೆಲಸಗಳನ್ನು ಮಾಡುತ್ತ ಹೋದರೆ ಮನೋಬಲ ವೃದ್ಧಿಸುತ್ತದೆ.

ಕನಸು ಕಾಣುವುದು, ಯೋಜನೆಗಳನ್ನು ಹಾಕಿಕೊಳ್ಳುವುದು ಸುಲಭ. ಆದರೆ ತಕ್ಷಣದ ಸಂತಸ ಪಡೆಯುವ ಹಂಬಲವನ್ನು ಮೀರಿನಿಂತು ಕ್ರಿಯಾಶೀಲರಾಗುವವರಿಗೆ ಮಾತ್ರ ಯಶಸ್ಸು ಲಭಿಸುವುದು. ಇದು ಸಾರ್ವಕಾಲಿಕ ಸತ್ಯ..

Courtesy.. whatsapp msg

Monday 6 January 2020

ಆತ್ಮವಿಶ್ವಾಸದೊಂದಿಗೆ ಜೀವನ ಪ್ರೀತಿ

*ಆತ್ಮವಿಶ್ವಾಸದೊಂದಿಗೆ ಜೀವನ ಪ್ರೀತಿ*...

ನಮ್ಮೆಲ್ಲರಿಗೂ ಇಂದು ಬೇಕಾಗಿರುವುದು ಸಮಸ್ಯೆಗಳಿಲ್ಲದ ಜೀವನ. ಅದು ಅಸಾಧ್ಯ ಎಂದು ಗೊತ್ತಿದ್ದರೂ ನಾವು ಸಮಸ್ಯೆಗಳನ್ನು ಇಷ್ಟಪಡುವುದಿಲ್ಲ. ಆದರೆ ಸಮಸ್ಯೆಗಳು ಮಾರುವೇಷದಲ್ಲಿ ಬರುವ ಅವಕಾಶಗಳು. ಕಡಿದು ಕೆತ್ತಲ್ಪಟ್ಟ ಕಲ್ಲೇ ವಿಗ್ರಹವಾಗುವುದೆಂಬ ಅರಿವಿದ್ದರೂ ನೋವೇ ಆಗದೇ ಮೂರ್ತಿಯಾಗಬೇಕೆಂದು ಬಯಸುವವರೇ ಜಾಸ್ತಿ. ಏಕೆಂದರೆ ಈ ಜಗತ್ತಿನಲ್ಲಿ ಸಮಸ್ಯೆಗಳೇ ಸಾಧನೆಗೆ ಮೂಲವೆಂಬುದರ ಅರಿವಿದ್ದರೂ ಹಳಹಳಿಸುವವರೇ ಹೆಚ್ಚು. ಸಮಸ್ಯೆ ದೊಡ್ಡದಾದಷ್ಟೂ ಪರಿಹಾರ ದೊಡ್ಡದಿರುತ್ತದೆ. ಪರಿಹಾರ ದೊಡ್ಡದಾದಷ್ಟೂ ನಾವು ಹರಿಸುವ ಬೆವರು, ಪಡುವ ಕಷ್ಟ ಹೆಚ್ಚಾಗಿರುತ್ತದೆ. ಹಿರಿದನ್ನು ಸಾಧಿಸುವ ಬಯಕೆಯಿದ್ದವರು ಏರಿಳಿತಗಳ ದುರ್ಗಮ ಹಾದಿಯಲ್ಲಿ ಸಾಗಲೇಬೇಕು. ಅಂದಾಗ ಮಾತ್ರ ಯಶಸ್ಸು ಕೂಡ ದೊಡ್ಡ ಪ್ರಮಾಣದಲ್ಲಿ ಸಿಗುತ್ತದೆ. ಆದರೆ ನಾವಿದನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ.

ಆದರೆ ನೆನಪಿರಲಿ, ತೊಂದರೆಗಳನ್ನು, ಕಷ್ಟಗಳನ್ನು ಅವಕಾಶ ಎಂದು ನೋಡಿದವರೇ ಇಂದು ಜಗತ್ತಿನಲ್ಲಿ ಯಶಸ್ವಿಯಾಗಿದ್ದಾರೆ. ಬಿಸಿಲಿನ ಧಗೆಗೆ ‘ಅಬ್ಬಾ ದರಿದ್ರ ಬಿಸಿಲು’ ಎನ್ನದವರುಂಟೇ? ಆದರೆ ಕೂಲರ್, ಎಸಿ ಸಂಶೋಧಿಸಿ ಆ ಸಮಸ್ಯೆಗೆ ಯಾರೋ ಪರಿಹಾರ ಕಂಡುಹಿಡಿದರು. ಚಳಿಗಾಲವನ್ನು ಶಪಿಸುವವರು ಶಪಿಸುತ್ತಲೇ ಇದ್ದರು. ಆದರೆ ಯಾರೋ ಒಬ್ಬ ಹೀಟರ್ ಕಂಡುಹಿಡಿದ. ಸೊಳ್ಳೆಗಳು ಯಾರಿಗೆ ಸಮಸ್ಯೆಯಲ್ಲ? ಎಲ್ಲರೂ ಗೊಣಗುತ್ತಲೇ ಇದ್ದರು. ಆದರೆ ಒಬ್ಬನಿಗೆ ಸೊಳ್ಳೆಬತ್ತಿಗಳನ್ನು ಮಾಡುವ ಐಡಿಯಾ ಹೊಳೆಯಿತು. ಈಗ ಆ ಎಲ್ಲ ಕಂಪನಿಗಳು ಅಪಾರ ಹಣ ಸಂಪಾದಿಸುತ್ತಿವೆ. ಹಾಗಾಗಿ ಯಾವುದಾದರೂ ಸಮಸ್ಯೆ, ನೋವು, ದುಃಖ ನಮ್ಮನ್ನು ಕಾಡುತ್ತಿದ್ದರೆ ಆಕಾಶ ಕಳಚಿ ತಲೆಯ ಮೇಲೆ ಬಿದ್ದವರಂತೆ ಮಾಡುವ ಅಗತ್ಯವಿಲ್ಲ.. ಕಾರಣ ಅದೊಂದು ವೇಷ ಮರೆಸಿಕೊಂಡು ಬಂದ ಸುವರ್ಣಾವಕಾಶ. ಅದು ಸಮಸ್ಯೆ ಎಂದು ನಮಗೆ ಆರಂಭದಲ್ಲಿ ಅನ್ನಿಸುತ್ತದೆ ಅಷ್ಟೇ. ಇದೊಂದು ಸ್ಥಿತಿ,. ಅನಿವಾರ್ಯ ಸ್ಥಿತಿ.. ಬದುಕಿನಲ್ಲಿ ಸಮಸ್ಯೆಗಳೇ ಇಲ್ಲ ಎಂದಾದರೆ ಅದು ಬದುಕೇ ಅಲ್ಲ. ಜಗತ್ತಿನ ಎಲ್ಲ ಸಂಶೋಧನೆಗಳೂ ಆಗಿದ್ದರ ಹಿಂದೆ ಒಂದಲ್ಲ ಒಂದು ಸಮಸ್ಯೆಗೆ ಪರಿಹಾರ ಹುಡುಕುವ ಉದ್ದೇಶವೇ ಇತ್ತು.. ಏಕೆಂದರೆ ಸಮಸ್ಯೆಯಿಲ್ಲದೆ ಯಾರೂ ಪರಿಹಾರ ಹುಡುಕುವ ಗೋಜಿಗೆ ಹೋಗುವುದಿಲ್ಲ.. ‘ಅವಶ್ಯಕತೆಯೇ ಆವಿಷ್ಕಾರದ ತಾಯಿ’ ಎಂಬುದನ್ನು ನಾವೆಲ್ಲ ಒಪ್ಪುತ್ತೇವೆ.. ಆದರೆ ಹೊಸ ಸಾಧ್ಯತೆಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳಲು ಅಳುಕುತ್ತೇವೆ.. ಕಾರಣ ಆತ್ಮವಿಶ್ವಾಸದ ಕೊರತೆ..

ನಮ್ಮೆಲ್ಲರಲ್ಲೂ ಅಪಾರ ಸಾಮರ್ಥ್ಯ ಅಡಗಿದೆ ಎಂಬ ಮಾತನ್ನು ಬಹಳ ಹಿಂದಿನಿಂದಲೂ ಕೇಳುತ್ತ ಬಂದಿದ್ದೇವೆ.. ಈ ಸಾಮರ್ಥ್ಯದ ಬಲದಿಂದ ನಮಗೇನು ಬೇಕೋ ಅದನ್ನು ಪಡೆದುಕೊಳ್ಳುವುದು ಸಾಧ್ಯ.. ಆದರೆ ಬಹಳ ಜನರಿಗೆ ತಮ್ಮೊಳಗಿನ ಶಕ್ತಿಯ ಅರಿವೇ ಇರುವುದಿಲ್ಲ.. ಅಲಿಬಾಬಾನಿಗೆ ಸಿಕ್ಕ ಸಂಪದ್ಭರಿತ ಗುಹೆ ಅದು.. ಆದರೆ ಅದಕ್ಕೊಂದು ಮಂತ್ರವಿದೆ.. ಮಂತ್ರವಿಲ್ಲದೆ ಹೋದರೆ ಗುಹೆಯ ಬಾಯಿ ತೆರೆಯದು.. ನಮ್ಮ ಮನಸ್ಸಿನ ಅಪಾರ ಶಕ್ತಿಯ ಕೀಲಿ ಯಾವುದೆಂದರೆ ವಿಲ್​ಪವರ್ ಅಥವಾ ನಂಬಿಕೆ.. ತಮ್ಮ ‘ಪವರ್ ಆಫ್ ಸಬ್​ಕಾನ್ಷಿಯಸ್ ಮೈಂಡ್’ ಎಂಬ ಪ್ರಸಿದ್ಧ ಪುಸ್ತಕದಲ್ಲಿ ಲೇಖಕ ಜೋಸೆಫ್ ಮರ್ಫಿ ಹೇಳುತ್ತಾರೆ, ‘ಒಂದು ಉಕ್ಕಿನ ತುಂಡನ್ನು ಆಯಸ್ಕಾಂತವಾಗಿ ಮಾರ್ಪಡಿಸಿದರೆ ಅದು ತನ್ನ ಭಾರಕ್ಕಿಂತ ಹನ್ನೆರಡು ಪಟ್ಟು ಹೆಚ್ಚು ಭಾರವನ್ನು ಎತ್ತಬಲ್ಲುದು.. ಆದರೆ ಅದೇ ಉಕ್ಕಿನಲ್ಲಿರುವ ಆಯಸ್ಕಾಂತೀಯ ಶಕ್ತಿ ಹೋದರೆ ಒಂದು ಪುಟ್ಟ ಹಕ್ಕಿಗರಿಯಷ್ಟು ಭಾರವನ್ನೂ ಅದು ಎತ್ತಲಾರದು.. ಅದೇ ರೀತಿ ಸಮಾಜದಲ್ಲೂ ಎರಡು ರೀತಿಯ ಜನರಿರುತ್ತಾರೆ.. ಆಯಸ್ಕಾಂತದಂಥವರು ಮತ್ತು ಉಕ್ಕಿನ ತುಂಡಿನಂಥವರು.. ತುಂಬು ವಿಶ್ವಾಸ ಮತ್ತು ನಂಬಿಕೆ ಇರುವ ಜನರು ಆಯಸ್ಕಾಂತದಂತೆ.. ಇವರು ಎಂಥ ಪರಿಸ್ಥಿತಿಯಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲ.. ರಾತ್ರಿಯಾಗುವುದೇ ಬೆಳಗಾಗಲು ಎಂಬುದು ಇವರ ನಂಬಿಕೆ.. ಮತ್ತದು ವಾಸ್ತವ ಕೂಡ.. ಇನ್ನು ಯಾವಾಗಲೂ ಭಯ ಮತ್ತು ಸಂದೇಹಗಳಿರುವ ಮನುಷ್ಯರು ಮಾಮೂಲಿ ಉಕ್ಕಿನ ತುಂಡಿನಂತೆ.. ಅವಕಾಶಗಳು ಬಂದಾಗ ನಾನು ವಿಫಲನಾಗುತ್ತೇನೆ, ಹಣ ಕಳೆದುಕೊಳ್ಳುತ್ತೇನೆ, ಜನರು ನನ್ನನ್ನು ನೋಡಿ ನಗುತ್ತಾರೆ ಎಂದೆಲ್ಲ ಯೋಚಿಸಿ ಅವರು ಸುಮ್ಮನಾಗಿಬಿಡುತ್ತಾರೆ.. ಇಂತಹ ವ್ಯಕ್ತಿಗಳು ಬದುಕಿನಲ್ಲಿ ಬಹಳ ಮುಂದೆ ಹೋಗಲಾರರು, ಅವರು ಎಲ್ಲಿರುತ್ತಾರೋ ಅಲ್ಲಿಯೇ ಇರುತ್ತಾರೆ’..

ದೃಢನಿರ್ಧಾರ ಕೈಗೊಳ್ಳಲು ಮನಸ್ಸಿಗೆ ನಂಬಿಕೆ ಬೇಕು.. ನಾವು ಯಾವಾಗಲೂ ಅವರಿವರು ಹೇಳಿದ ಮಾತುಗಳು, ಅಭಿಪ್ರಾಯಗಳು, ಸಂಪ್ರದಾಯಗಳು ಮತ್ತು ಸುತ್ತಲಿನ ವಾತಾವರಣದಿಂದ ರೂಪಿತಗೊಂಡ ನಮ್ಮದೇ ಯೋಚನೆಗಳಿಂದ ನಮ್ಮ ಸಾಮರ್ಥ್ಯವನ್ನು ಅಂದಾಜು ಮಾಡುತ್ತಿರುತ್ತೇವೆ.. ಹಾಗಾಗಿ ನಮ್ಮನ್ನು ನಾವೇ ನಂಬಲು ಎಷ್ಟೋ ಸಂದರ್ಭದಲ್ಲಿ ಸಾಧ್ಯವಾಗುವುದಿಲ್ಲ.. ಇಂತಹ ನೆಗೆಟಿವ್ ಯೋಚನೆಗಳನ್ನು ಬದಿಗಿಡುವುದು ಬಹಳ ಮುಖ್ಯ.. ಎಡಿಸನ್, ಐನ್​ಸ್ಟೀನ್​ರಂತಹ ಮೇಧಾವಿಗಳು ಬೇರೆಯವರ ಅಭಿಪ್ರಾಯದ ಪ್ರಕಾರ ದಡ್ಡರೇ ಆಗಿದ್ದರು.. ಆದರೆ ಅವರಿಗಿದ್ದ ಆತ್ಮವಿಶ್ವಾಸ, ತಮ್ಮ ಮೇಲೆ ತಮಗಿದ್ದ ನಂಬಿಕೆ ಅವರನ್ನು ವಿಶ್ವಮಾನ್ಯರನ್ನಾಗಿ ಮಾಡಿತು.. ‘ನಿನ್ನನ್ನು ನೀನು ನಂಬದೇ ಹೋದರೆ ಮುಕ್ಕೋಟಿ ದೇವತೆಗಳನ್ನು ನಂಬಿದರೂ ಪ್ರಯೋಜನವಿಲ್ಲ’ ಎನ್ನುತ್ತಿದ್ದರು ಸ್ವಾಮಿ ವಿವೇಕಾನಂದರು..

ನಮ್ಮ ಮೇಲೆ ನಮಗೆ ನಂಬಿಕೆ ಇಲ್ಲದಿರುವುದರಿಂದಲೇ ನಾವು ಕನಸು ಕಾಣಲೂ ಹೆದರುತ್ತೇವೆ. ಆದರೆ ಸ್ವನಂಬಿಕೆ ಮತ್ತು ಕಠಿಣ ಪರಿಶ್ರಮ ಒಂದು ಅತ್ಯುತ್ತಮ ಕಾಂಬಿನೇಶನ್.. ಇವೆರಡರಲ್ಲಿ ಯಾವುದು ಇಲ್ಲದಿದ್ದರೂ ಸಾಧನೆ ಸಾಧ್ಯವಿಲ್ಲ.. ‘ಸಂಗೀತದ ರಾಜ’ ಎಂದು ಕರೆಯಿಸಿಕೊಂಡಿದ್ದ ಹಾಡುಗಾರ ಎಲ್ವಿಸ್ ಪ್ರಿಸ್ಲೆ ಅವರ ಉದಾಹರಣೆಯನ್ನೇ ತೆಗೆದುಕೊಳ್ಳೋಣ.. ಆತ ಶಾಲೆಯಲ್ಲಿ ಸಾಧಾರಣ ವಿದ್ಯಾರ್ಥಿ ಎನಿಸಿಕೊಂಡವನು.. ಜನರೆದುರು ಹಾಡಲು ಮುಜುಗರ ಪಡುತ್ತಿದ್ದವನು.. ಅವನ ಶಾಲೆಯ ಸಂಗೀತ ಶಿಕ್ಷಕರೇ ಅವನಿಗೆ ಸಂಗೀತದ ಗಂಧಗಾಳಿಯಿಲ್ಲ ಎಂದು ಹೇಳಿದ್ದರು.. ಆದರೆ ಎಲ್ವಿಸ್ ತನ್ನ ಸ್ವಪ್ರಯತ್ನದಿಂದ, ತನ್ನ ಮೇಲಿನ ನಂಬಿಕೆಯಿಂದ ಸಂಗೀತಲೋಕದ ರಾಜನೆನಿಸಿಕೊಂಡಿದ್ದು ಈಗ ಇತಿಹಾಸ. ‘ನಿನ್ನ ಕಂಠ ಚೆನ್ನಾಗಿಲ್ಲ’ ಎಂದು ಆಕಾಶವಾಣಿಯಿಂದ ತಿರಸ್ಕರಿಸಲ್ಪಟ್ಟ ಅಮಿತಾಭ್ ಬಚ್ಚನ್ ಎಂಬ ಉದ್ದನೆಯ ಬಿದಿರುಗಳದಂತಹ ತರುಣ ತನ್ನ ಆತ್ಮವಿಶ್ವಾಸ ಮತ್ತು ಸತತ ಪ್ರಯತ್ನದಿಂದ ರಾಜೇಶ್ ಖನ್ನಾ ಎಂಬ ಚಾಕಲೇಟ್ ಹೀರೋನನ್ನೂ ಹಿಂದಿಕ್ಕಿ ಬಾಲಿವುಡ್ ಸೂಪರ್​ಸ್ಟಾರ್ ಆಗಿಬಿಟ್ಟ! ರೇಡಿಯೋದವರು ತಿರಸ್ಕರಿಸಿದ ಅದೇ ದನಿ ಇಂದು ಕೇಳುಗರನ್ನು ಮೋಡಿ ಮಾಡುತ್ತಿದೆ! ಆ ಅಪರೂಪದ ದನಿಗೆ ಇಂದು ಕೋಟಿಕೋಟಿ ಕಿಮ್ಮತ್ತು.. ಸಯಿಚಿರೋ ಹೊಂಡಾ ಎಂಬ ಯುವಕ ಟೊಯೊಟಾ ಕಂಪನಿಯಲ್ಲಿ ಇಂಜಿನಿಯರ್ ಹುದ್ದೆಯ ಸಂದರ್ಶನಕ್ಕೆ ಹೋದಾಗ ತಿರಸ್ಕರಿಸಲ್ಪಟ್ಟ.. ಕೆಲಕಾಲ ನಿರುದ್ಯೋಗಿಯಾಗಿದ್ದ ಆತ ಬೇರೆ ಬೇರೆ ವ್ಯವಹಾರಗಳಿಗೆ ಕೈಹಾಕಿ ಕೊನೆಗೆ ತನ್ನದೇ ಆದ ಕಾರು ಕಂಪನಿಯೊಂದನ್ನು ಸ್ಥಾಪಿಸಿದ.. ವಿಶ್ವ ಪ್ರಸಿದ್ಧ ಹೊಂಡಾ ಕಂಪನಿಯ ಮಾಲಿಕನ ಕಥೆ ಇದು.. ಎರಡು ಬಾರಿ ಇಂಗ್ಲೆಂಡಿನ ಪ್ರಧಾನಿಯಾಗಿದ್ದ ವಿನ್​ಸ್ಟನ್ ರ್ಚಚಿಲ್ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದವರೂ ಹೌದು.. ರ್ಚಚಿಲ್ ಶಾಲೆಯಲ್ಲಿದ್ದಾಗ ಅತೀ ಸಾಧಾರಣ ವಿದ್ಯಾರ್ಥಿ.. ಆರನೇ ಗ್ರೇಡ್​ನಲ್ಲಿ ಅನುತ್ತೀರ್ಣರಾಗಿದ್ದರು.. ಅವರ ರಾಜಕೀಯ ಜೀವನವೂ ಹತ್ತು ಹಲವು ಏಳುಬೀಳುಗಳಿಂದ ಕೂಡಿತ್ತು. ಆದರೆ ಅರವತ್ತು ದಾಟಿದ ನಂತರ ಅವರು ತಮ್ಮೆಲ್ಲ ಪ್ರಮುಖ ಸಾಧನೆಗಳನ್ನು ಮಾಡಿದರು.. ನಿಜ ಅರ್ಥದಲ್ಲಿ ರ್ಚಚಿಲ್​ಗೆ ಅರವತ್ತು ಮರಳಿ ಅರಳುವ ವಯಸ್ಸು!!

ಆರಂಭದ ಹಿಂಜರಿಕೆ, ಅವಮಾನ, ತಿರಸ್ಕಾರಗಳನ್ನು ಮೀರಿ ಯಶಸ್ಸಿನ ತುತ್ತ ತುದಿಗೆ ಏರಿದ ಇಂತಹ ಸಾಧಕರ ಪಟ್ಟಿ ಮುಂದುವರಿಯುತ್ತಲೇ ಹೋಗುತ್ತದೆ.. ಸೊನ್ನೆಯಿಂದ ಪ್ರಾರಂಭಿಸಿ ಜಗತ್ಪ್ರಸಿದ್ಧರಾದ ಅಪರೂಪದ ಈ ವ್ಯಕ್ತಿಗಳಿಂದ ನಾವು ಕಲಿಯಬೇಕಾದ ಪಾಠ ಇಷ್ಟೇ.. ಯಾವ ಸೋಲೂ ಬದುಕಿನ ಕೊನೆಯಲ್ಲ, ಅದು ಹೊಸ ಗೆಲುವಿನ, ಹೊಸ ಬದುಕಿನ ಆರಂಭವಾಗಿರಬಹುದು.. ತನ್ನನ್ನು ತಾನು ಒಪ್ಪಿಕೊಂಡವರಿಗೆ ಜಗತ್ತಿನ ಒಪ್ಪಿಗೆ, ತಿರಸ್ಕಾರ ಮುಖ್ಯವಾಗುವುದಿಲ್ಲ.. ಅವರು ಜಗತ್ತನ್ನು ಒಪ್ಪಿಸುವ ಗೋಜಿಗೂ ಹೋಗುವುದಿಲ್ಲ.. ನಿಧಾನವಾಗಿಯಾದರೂ ಸಮಾಜ ತಾನೇ ಅವರನ್ನು ಒಪ್ಪಿಕೊಳ್ಳುತ್ತದೆ.. ಮತ್ತು ನಾವು ಎದುರಿಸಬೇಕಿರುವುದು ನಮ್ಮ ಭಯವನ್ನು, ನಮ್ಮ ಹಿಂಜರಿಕೆಯನ್ನು.. ಅದಕ್ಕೆ ಬೇಕಿರುವ ಆಯುಧವೆಂಬ ನಂಬಿಕೆ.. ಆರ್ಥರ್ ಆಶ್ಲೇ ಹೇಳುವಂತೆ ಯಶಸ್ಸಿನ ಕೀಲಿಕೈ ಸ್ವ ನಂಬಿಕೆ ಮತ್ತು ಆ ಆತ್ಮವಿಶ್ವಾಸ ಬರುವುದು ಸರಿಯಾದ ತಯಾರಿಯಿಂದ. ಆತ್ಮವಿಶ್ವಾಸದಿಂದ ನಮ್ಮಷ್ಟಕ್ಕೆ ನಾವು ಪ್ರಯತ್ನಪಡುತ್ತ ಸಾಗಿದರೆ ಗುರಿ ತಲುಪುತ್ತೇವೆ.. ಆ ಗುರಿ ಸಣ್ಣ ಸರ್ಕಾರಿ ನೌಕರಿ ಹಿಡಿಯುವುದಾಗಿರಬಹುದು, ಐಎಎಸ್ ಅಧಿಕಾರಿಯಾಗುವುದಿರಬಹುದು, ಪುಟ್ಟ ಅಂಗಡಿ ಇಡುವುದು, ಹೊಸ ವ್ಯವಹಾರ ಮಾಡುವುದು, ಇಲ್ಲವೇ ಇದ್ದುದರಲ್ಲಿಯೇ ತೃಪ್ತಿಯಿಂದ ಬದುಕುವುದು, ನಾಲ್ಕು ಮಂದಿಗೆ ಉಪಕಾರಿಯಾಗುವುದು, ಸಾಹಿತ್ಯವೇ ಮುಂತಾದ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧಿಸುವುದು ಏನಾದರೂ ಆಗಿರಬಹುದು. ಪ್ರತಿಯೊಂದು ಗುರಿಯೂ ಮುಖ್ಯವೇ. ಅದನ್ನು ಬೇರೆಯವರೊಂದಿಗೆ ಹೋಲಿಸಿ ನಿರಾಶರಾಗುವ ಅಗತ್ಯವಿಲ್ಲ.. ಏಕೆಂದರೆ ನಮ್ಮ ಬದುಕಿನ ಪ್ರಧಾನ ಪಾತ್ರ ನಾವೇ.. ಬನ್ನಿ, ಆತ್ಮವಿಶ್ವಾಸದಿಂದ ಮುನ್ನಡೆಯುವಾ..

Courtesy.. WhatsApp msg

Sunday 5 January 2020

Time is not going

It is a mistake to think time is going. Time is not going. Time is here until the world ends. It is you that is going. You don’t waste time. Time is infinite. You waste yourself. You are finite. It is you that grows old and die. Time doesn’t. So make better use of yourself before you expire. And one of the worst things to do with time is comparing yourself to others. A cow eats grass and gets fat but if dog eats grass, it will die. Never compare yourself with others. Run your race. What works for one person may be that which will kill you. 

Focus on the gifts and talents God gave you and don’t be envious of the blessings He gave others. Both Lion and Shark are professional hunters, BUT A Lion cannot hunt in the Ocean and a Shark cannot hunt in the jungle .That a Lion cannot hunt in the ocean doesn't make him useless and that a Shark cannot hunt in the jungle doesn't also make him useless both have their own territory where they can do well*

If a rose smells better than tomatoes, It doesn't mean the rose can make a better stew. Don't try to compare yourself to others. You also have your own strength, look for it and build on it. All animals that exist, were in Noah's ark. A snail is one of those animals.
 If God could wait long enough for snails to enter Noah's ark; His door of grace won't close till you reach your expected position in life. Never look down on yourself, keep looking up. Because motivational guru Zig Zagler says self condemnation does no good .
Remember that Broken crayons still colour.Keep on pushing, you never can tell how close you are to your goal...!

Wednesday 1 January 2020

Who packed My Parachute?

Who packed My Parachute?
Air Commodore Vishal was a Jet Pilot. In a combat mission his fighter plane was destroyed by a missile. He however ejected himself and parachuted safely. He won acclaims and appreciations from many.After five years one day he was sitting with his wife in a restaurant. A man from another table came to him and said "You're Captain Vishal ! You flew jet fighters. You were shot down!"
"How in the world did you know that?" asked Vishal.
"I packed your parachute," the man smiled and replied.
Vishal gasped in surprise and gratitude and thought if parachute hadn't worked, I wouldn’t be here today.Vishal couldn't sleep that night, thinking about that man. He wondered how many times I might have seen him and not even said 'Good morning, how are you?' or anything because, he was a fighter pilot and that person was just a safety worker"
So friends, who is packing your parachute?
Everyone has someone who provides what they need to make it through the day. We need many kinds of parachutes– we need the physical parachute, the mental parachute, the emotional parachute, and the spiritual parachute.
We call on all these supports before reaching safety.Sometimes in the daily challenges that life gives us, we miss what is really important.We may fail to say hello, please, or thank you, congratulate someone on something wonderful that has happened to them, give a compliment, or just do something nice for no reason.As you go through this last week of 2019, this month, this year, recognize the people who pack your parachute.
I just want to thank everyone who packed my parachute in year 2019 one way or the other- through your words, deeds, prayers etc!! Don't want to take any of you for granted .


Wishing you all a pleasant and a memorable end to 2019 and an awesome beginning of 2020.

Courtesy... Mail from friend

ಗೆಲುವು ಸೋಲಾಗಬಾರದು.

"ಗೆಲುವೇ ಸೋಲಾಗಬಾರದು; ಮಕ್ಕಳು ಸೋಲಲಿ ಬಿಡಿ" ತಂದೆ ತಾಯಂದಿರ ಯೋಚನಾ ಕ್ರಮವೇ ಮಕ್ಕಳ ಅಭಿರುಚಿ, ಆಸಕ್ತಿಯನ್ನು ರೂಪಿಸುತ್ತದೆ. ಮುಂದೆ ಅವರ ಭವಿಷ್ಯವನ್ನು ...